Home ಟಾಪ್ ಸುದ್ದಿಗಳು ಕಂಟೈನರ್ ನಲ್ಲಿಟ್ಟಿದ್ದ 20 ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಪಾಲು

ಕಂಟೈನರ್ ನಲ್ಲಿಟ್ಟಿದ್ದ 20 ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಪಾಲು

ನಾಸಿಕ್:  ಜಿತೇಂಡ್ರ ಇವಿ ಟೆಕ್ ಸಂಸ್ಥೆಯ 20 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕಂಟೈನರ್ ಗಳಲ್ಲಿ ಸಾಗಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲ್ಲಾ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.  ಬೆಂಕಿ ಹೊತ್ತಿರುವುದಕ್ಕೆ ಮೂಲ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಏ.09 ರಂದು ನಮ್ಮ ಫ್ಯಾಕ್ಟರಿ ಗೇಟ್ ಬಳಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ತಕ್ಷಣವೇ ನಮ್ಮ ತಂಡದ ಸಮಯೋಚಿತ ಪ್ರವೇಶದಿಂದ, ಅನಾಹುತವೊಂದು ತಪ್ಪಿದೆ ಎಂದು ಸಂಸ್ಥೆ ತಿಳಿಸಿದೆ. 

ಬೇಸಿಗೆ ಪ್ರಾರಂಭವಾದಾಗಿನಿಂದಲೂ ಎಲೆಕ್ಟ್ರಿಕ್ ವಾಹನಗಳು, ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿರುವ 6 ನೇ ಘಟನೆ ಇದಾಗಿದೆ.

Join Whatsapp
Exit mobile version