Home ಟಾಪ್ ಸುದ್ದಿಗಳು ಶ್ರೀನಗರದಲ್ಲಿ ಉದ್ಯಮಿಗಳು ಸೇರಿದಂತೆ ನಾಲ್ವರ ಹತ್ಯೆ: ನಾಗರಿಕರ ಹತ್ಯೆಗೆ ಅಘಾತ ವ್ಯಕ್ತಪಡಿಸಿದ ಮೆಹಬೂಬ ಮುಫ್ತಿ

ಶ್ರೀನಗರದಲ್ಲಿ ಉದ್ಯಮಿಗಳು ಸೇರಿದಂತೆ ನಾಲ್ವರ ಹತ್ಯೆ: ನಾಗರಿಕರ ಹತ್ಯೆಗೆ ಅಘಾತ ವ್ಯಕ್ತಪಡಿಸಿದ ಮೆಹಬೂಬ ಮುಫ್ತಿ

ಅನಂತನಾಗ್: ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ನೆಪದಲ್ಲಿ ಇಬ್ಬರು ಉದ್ಯಮಿಗಳು ಸೇರಿದಂತೆ ನಾಲ್ವರನ್ನು ಹತ್ಯೆಗೈದ ಘಟನೆ ಶ್ರೀನಗರದಿಂದ ಎಂದು ವರದಿಯಾಗಿದೆ.

ಭದ್ರತಾ ಪಡೆಗಳ ನಡೆಸಿದ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ಸೇರಿದಂತೆ ಬೆಂಬಲಿಗರು ಹತರಾಗಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಉದ್ಯಮಿಗಳಾದ ಡಾ. ಮುದಸ್ಸಿರ್ ಗುಲ್ ಮತ್ತು ಅಲ್ತಾಫ್ ಭಟ್ ಎಂಬವರು ಸೋಮವಾರ ಸಂಜೆ ಹೈದರ್ ಪುರ ಎಂಬಲ್ಲಿ ಎನ್ಕೌಂಟರ್ ಗೆ ಬಲಿಯಾಗಿದ್ದರು.

ಭದ್ರತಾ ಪಡೆಗಳ ಸೋಮವಾರ ನಡೆಸಿದ ಎನ್ಕೌಂಟರ್ ನಲ್ಲಿ ಮನೆ ಮಾಲೀಕ, ವೈದ್ಯ ಸೇರಿದಂತೆ ನಾಲ್ವರ ಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಭಯೋತ್ಪಾದಕರ ವಿರುದ್ಧ ಹೋರಾಡುವ ನೆಪದಲ್ಲಿ ತನ್ನದೇ ನಾಗರಿಕರನ್ನು ಗುರಿಯಾಗಿಸಿ ಹತ್ಯೆ ನಡೆಸಿರುವುದು ತುಂಬಾ ನೋವುಂಟು ಮಾಡಿದೆ ಎಂದು ವಿಷಾದಿಸಿದರು.

ಮಾತ್ರವಲ್ಲ ಈ ಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ವಹಿಸಬೇಕೆಂದು ಮೆಹಬೂಬ ಮುಫ್ತಿ ಒತ್ತಾಯಿಸಿದ್ದಾರೆ.

ಅಂತಿಮ ಸಂಸ್ಕಾರಕ್ಕಾಗಿ ಮೃತದೇಹಗಳನ್ನು ಹಸ್ತಾಂತರಿಸುವಂತೆ ಕುಟುಂಬಗಳು ಒತ್ತಾಯಿಸಿವೆ. ಕಾನೂನು ಸುವ್ಯವಸ್ಥೆ ಹದಗೆಡುವ ಕಾರಣ ಮೃತದೇಹಗಳನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾತ್ರವಲ್ಲ ಈ ಮೃತದೇಹಗಳನ್ನು ಶ್ರೀನಗರದ 100 ಕಿ.ಮೀ ದೂರದ ಹಂದ್ವಾರ ಎಂಬಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version