Home ಟಾಪ್ ಸುದ್ದಿಗಳು 1984ರ ಸಿಖ್ ವಿರೋಧಿ ಗಲಭೆ: ದನಿ ಮಾದರಿ ನೀಡಲು ಸಿಬಿಐ ಎದುರು ಹಾಜರಾದ ಜಗದೀಶ್ ಟೈಟ್ಲರ್

1984ರ ಸಿಖ್ ವಿರೋಧಿ ಗಲಭೆ: ದನಿ ಮಾದರಿ ನೀಡಲು ಸಿಬಿಐ ಎದುರು ಹಾಜರಾದ ಜಗದೀಶ್ ಟೈಟ್ಲರ್

ನವದೆಹಲಿ: ದಿಲ್ಲಿಯ ಪುಲ್ ಬಂಗಾಶ್ ಪ್ರದೇಶದಲ್ಲಿ 1984ರಲ್ಲಿ ನಡೆದ ಸಿಖ್ ಗಲಭೆ ಸಂಬಂಧ ಮಂಗಳವಾರ ಸಿಬಿಐ ಸಮನ್ಸ್ ಮೇಲೆ ಹಾಜರಾದ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು ತಮ್ಮ ಧ್ವನಿ ಮಾದರಿ ನೀಡಿದರು.


ಅವರು ಫೋರೆನ್ಸಿಕ್ ಪ್ರಯೋಗ ಶಾಲೆಯಲ್ಲಿ ಧ್ವನಿ ಪರೀಕ್ಷೆಗೆ ಒಳಗಾದರು.
39 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಾಕ್ಷಿ ದೊರೆತಿದ್ದು ಅದಕ್ಕೆ ಟೈಟ್ಲರ್ ರ ದನಿ ಪರೀಕ್ಷೆ ಅಗತ್ಯದ್ದಾಗಿತ್ತು ಎಂದು ಸಿಬಿಐ ಹೇಳಿದೆ.
ಪುಲ್ ಬಂಗಾಶ್ ಪ್ರದೇಶದಲ್ಲಿ ಆ ಗಲಭೆಯಲ್ಲಿ ಹಲವು ಸಿಖ್ಖರನ್ನು ಹತ್ಯೆ ಮಾಡಲಾಗಿತ್ತು.


1984ರಲ್ಲಿ ಅವರದೇ ಅಂಗರಕ್ಷಕರಾದ ಸಿಖ್ ಭದ್ರತಾ ಸಿಬ್ಬಂದಿಯಿಂದ ಪ್ರಧಾನಿ ಇಂದಿರಾ ಗಾಂಧಿಯವರ ಕೊಲೆ ಆದಾಗ ಸಿಖ್ ವಿರುದ್ಧ ಹಿಂಸಾತ್ಮಕ ದಾಳಿಗಳು ನಡೆದಿದ್ದವು.

Join Whatsapp
Exit mobile version