Home ಟಾಪ್ ಸುದ್ದಿಗಳು 16 ಷರಿಯಾ ಕಾನೂನು ರದ್ದುಗೊಳಿಸಿ ಮಲೇಷ್ಯಾ ಸುಪ್ರೀಂ ಕೋರ್ಟ್‌ ತೀರ್ಪು

16 ಷರಿಯಾ ಕಾನೂನು ರದ್ದುಗೊಳಿಸಿ ಮಲೇಷ್ಯಾ ಸುಪ್ರೀಂ ಕೋರ್ಟ್‌ ತೀರ್ಪು

ಕ್ವಾಲಾಲಂಪುರ: 16 ಷರಿಯಾ ಆಧಾರಿತ ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿ ತೀರ್ಪು ನೀಡಿದೆ. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ 8:1ರ ಬಹುಮತದ ತೀರ್ಪು ಇದಾಗಿದೆ.

ಕೆಲಾಂಟಾನ್ ರಾಜ್ಯದಲ್ಲಿ ವಿಪಕ್ಷ ನೇತೃತ್ವದ ಸರ್ಕಾರವು ರೂಪಿಸಿದ್ದ 16 ಕಾನೂನುಗಳನ್ನು ಈ ಪೀಠವು ಅಮಾನ್ಯಗೊಳಿಸಿದೆ. ಲೈಂಗಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ರಕ್ತಸಂಬಂಧಿಗಳ ನಡುವೆ ಸಂಭೋಗ ನಡೆಸುವವರಿಗೆ ಶಿಕ್ಷೆ ವಿಧಿಸಲು ಷರಿಯಾ ಕಾನೂನು ರೂಪಿಸಿತ್ತು. ಮಲೇಷ್ಯಾದ ಒಕ್ಕೂಟಕ್ಕೆ ಅನ್ವಯವಾಗುವ ಕಾಯ್ದೆ ಇರುವಾಗ ರಾಜ್ಯವು ಆ ವಿಷಯಗಳ ಮೇಲೆ ಇಸ್ಲಾಮಿಕ್ ಕಾನೂನುಗಳನ್ನು ರೂಪಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೋರ್ಟ್‌ನ ಈ ತೀರ್ಪು ದೇಶದಾದ್ಯಂತ ಇರುವ ಷರಿಯಾ ಕೋರ್ಟ್‌ಗಳನ್ನು ಗೌಣವಾಗಿಸಲಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದು, ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version