Home ಟಾಪ್ ಸುದ್ದಿಗಳು ಶಿಕ್ಷಕನ ದೇಹದಿಂದ ಬರೋಬ್ಬರಿ 156 ‘ಕಲ್ಲು’ಗಳನ್ನು ಹೊರತೆಗೆದ ವೈದ್ಯರು !

ಶಿಕ್ಷಕನ ದೇಹದಿಂದ ಬರೋಬ್ಬರಿ 156 ‘ಕಲ್ಲು’ಗಳನ್ನು ಹೊರತೆಗೆದ ವೈದ್ಯರು !

ಹೈದರಾಬಾದ್: ವೈದ್ಯಲೋಕವೇ ಅಚ್ಚರಿಪಡುವಂತಹ ಘಟನೆಯೊಂದರಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಯನ್ನು ನಡೆಸದೆ ವ್ಯಕ್ತಿಯೊಬ್ಬನ ದೇಹದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೊರತೆಗೆಯಲು ವೈದ್ಯರು ಯಶಸ್ವಿಯಾಗಿದ್ದಾರೆ. ಹೈದರಾಬಾದ್’ನ ಪ್ರೀತಿ ಯೂರೋಲಜಿ ಮತ್ತು ಕಿಡ್ನಿ ಆಸ್ಪತ್ರೆಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

ಹುಬ್ಬಳ್ಳಿ ನಿವಾಸಿ 50 ವರ್ಷ ವಯಸ್ಸಿನ ಶಾಲಾ ಶಿಕ್ಷಕ ಬಸವರಾಜ್ ಮಡಿವಾಳರ್’ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಪ್ರೀತಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವೇಳೆ ಸ್ಕ್ಯಾನಿಂಗ್’ನಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ದೊಡ್ಡ ಗುಂಪುಗಳೇ ಇರುವುದು ಪತ್ತೆಯಾಗಿತ್ತು. ಮೂರು ಗಂಟೆಗಳ ಕಾಲ ಹರಸಾಹಸದ ಬಳಿಕ 156 ಮೂತ್ರಪಿಂಡದ ಕಲ್ಲುಗಳನ್ನು ತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ವಿಶೇಷವೆಂದರೆ ದೊಡ್ಡ ಶಸ್ತ್ರಚಿಕಿತ್ಸೆಯನ್ನು ನಡೆಸದೆ, ಲ್ಯಾಪ್ರೋಸ್ಕೋಪಿ ಹಾಗೂ ಎಂಡೋಸ್ಕೊಪಿ ಬಳಸಿ ಎಲ್ಲಾ ಕಲ್ಲುಗಳನ್ನು ಹೊರತೆಗೆಯಲಾಗಿದ್ದು, ಈ ವಿಧಾನದಲ್ಲಿ ವ್ಯಕ್ತಿಯೊಬ್ಬನ ದೇಹದಿಂದ ತೆಗೆದ ಗರಿಷ್ಠ ಪ್ರಮಾಣದ ಕಿಡ್ನಿ ಸ್ಟೋನ್ ಗಳ ಸಂಖ್ಯೆ ಇದಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಮೂತ್ರಪಿಂಡದ ಕಲ್ಲುಗಳನ್ನು ತೆಗದ ಬಳಿಕ ಶಿಕ್ಷಕ ಬಸವರಾಜ್ ಮಡಿವಾಳರ್ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ.  ರೋಗಿಯ ಮೂತ್ರಪಿಂಡವು ಸಾಮಾನ್ಯವಾಗಿ ಇರುವ ಸ್ಥಳದಲ್ಲಿರಲಿಲ್ಲ. ಸಾಮಾನ್ಯ ವ್ಯಕ್ತಿಗಳಿಗೆ ಮೂತ್ರನಾಳದ ಸನಿಹದಲ್ಲಿಯೇ ಮೂತ್ರಪಿಂಡವಿರುತ್ತದೆ. ಆದರೆ, ಈ ವ್ಯಕ್ತಿಯ ಮೂತ್ರಪಿಂಡ ಹೊಟ್ಟೆಯ ಸಮೀಪದಲ್ಲಿತ್ತು. “ಅಸಹಜ ಸ್ಥಳದಲ್ಲಿ ಮೂತ್ರಪಿಂಡವಿರುವುದು ಯಾವುದೇ ಸಮಸ್ಯೆಗೆ ಕಾರಣವಾಗುವುದಿಲ್ಲವಾದರೂ, ಈ ಸ್ಥಳದಿಂದ ಕಲ್ಲುಗಳನ್ನುಹೊರತೆಗೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದು ಆಸ್ಪತ್ರೆಯ ಯೂರಾಲಾಜಿಸ್ಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಚಂದ್ರಮೋಹನ್ ಹೇಳಿದ್ದಾರೆ.

Join Whatsapp
Exit mobile version