15,000 ರೂ. ವೆಚ್ಚದಲ್ಲಿ ಮಿನಿ ಉಪಗ್ರಹ ತಯಾರಿಸಿದ ತಮಿಳುನಾಡು ವಿದ್ಯಾರ್ಥಿಗಳು

0
291

ತಮಿಳುನಾಡು: ಚೆನ್ನೆೃ ಸಮೀಪದ ಕೆಳಂಬಕ್ಕಂ ಎಂಬಲ್ಲಿನ ಹಿಂದುಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್‌ನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು 15,000 ರೂ. ವೆಚ್ಚದಲ್ಲಿ ‘‘ಜೈ ಹಿಂದ್-1ಎಸ್’’ ಎಂಬ ಉಪಗ್ರಹವೊಂದನ್ನು ವಿನ್ಯಾಸಗೊಳಸಿದ್ದಾರೆ

.ಈ ಉಪಗ್ರಹವನ್ನು ನಮ್ಮ ಅಂಗೈಯಲ್ಲಿಯೇ ಹಿಡಿಯಬಹುದಾಗಿದ್ದು, ಇದರ ತೂಕ ಒಂದು ಸಾಧಾರಣ ಗಾತ್ರದ ಮೊಟ್ಟೆಗಿಂತಲೂ ಕಡಿಮೆಯಾಗಿದೆ. ಈ ಉಪಗ್ರಹದ ಮೂಲಕ ಹವಾಮಾನ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಬಹುದಾಗಿದೆ. ಈ ಉಪಗ್ರಹವು ಒಂದು ಸಣ್ಣ ನಾಲ್ಕು ಸೆಂ.ಮೀ. ಗಾತ್ರದ ಕ್ಯೂಬ್‌ನಂತಿದ್ದು, ಅದನ್ನು ಆಗಸ್ಟ್ ತಿಂಗಳಲ್ಲಿ ನಾಸಾದಿಂದ ಉಡಾವಣೆ ಮಾಡಲಾಗುವುದು ಎಂದು ತಿಳಿದುಬಂದಿದದೆ. ಇದರ ತೂಕ 33.39 ಗ್ರಾಂ ಆಗಿದೆ. ಇದರ ಹೊರಮೈಯ್ಯನ್ನು 3ಡಿ ಪ್ರಿಂಟ್ ಮಾಡಿದ್ದರಿಂದ ಹಗುರವಾಗಲು ಕಾರಣವಾಗಿದೆ. ಈ ಉಪಗ್ರಹವನ್ನು ಬಲೂನು ಅಥವಾ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಸೇರಿಸಲಾಗುವುದು ಎಂದು ತಿಳಿದುಬಂದಿದೆ. ಜೈಹಿಂದ್ ಉಪಗ್ರಹಕ್ಕೆ 20 ವಿಭಿನ್ನ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ಪ್ರತಿ ಸೆಕೆಂಡಿಗೆ ನಾಲ್ಕು ವಿಭಿನ್ನ ಮಾನದಂಡಗಳ ಆಧಾರದಲ್ಲಿ ಅದು ಮಾಹಿತಿ ಸಂಗ್ರಹಿಸುತ್ತದೆ. ಸಂಗ್ರಹಿಸಿದ ಮಾಹಿತಿ ಎಸ್‌ಡಿ ಕಾರ್ಡ್‌ನಲ್ಲಿ ದಾಖಲಾಗುತ್ತದೆ. ಉಪಗ್ರಹದಲ್ಲಿರುವ ಸೆನ್ಸರ್ ಮೊಡ್ಯೂಲ್‌ಗಳು ಹವಾಮಾನ ಪರಿಸ್ಥಿತಿಯ ಅಧ್ಯಯನಕ್ಕೆ ಸಹಕರಿಸುತ್ತವೆ.

LEAVE A REPLY

Please enter your comment!
Please enter your name here