ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದಿರುವ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಅಪರಿಚಿತರ ವಿರುದ್ಧ FIR ದಾಖಲಾಗಿದೆ.
ಪಂಜಾಬ್ ಪೊಲೀಸರೇ ಈ FIR ದಾಖಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 283ರಂತೆ ದೂರು ದಾಖಲಾಗಿದ್ದು, ಇದರಲ್ಲಿ ತಪ್ಪಿತಸ್ಥರಾದವರಿಗೆ ಗರಿಷ್ಠ 200 ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ಅಲ್ಲದೆ, ಕೇಂದ್ರ ಸರಕಾರ ನೇಮಕ ಮಾಡಿರುವ ಕೇಂದ್ರ ತಂಡ ಪಂಜಾಬ್ ನ ಫಿರೋಝ್ ಪುರಕ್ಕೆ ತೆರಳಿದ್ದು, ಘಟನಾ ಸ್ಥಳ ಪರಿಶೀಲಿಸಿದೆ. ಇದರ ಮಧ್ಯೆಯೇ ಪಂಜಾಬ್ ಸರಕಾರ ನೇಮಕ ಮಾಡಿದ್ದ ಸಮಿತಿಯೂ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಪ್ರಕರಣ ಸಂಬಂಧ FIR ದಾಖಲಿಸಲಾಗಿದೆ ಎಂದು ಹೇಳಿದೆ.