150 ಕೋಟಿ ರೂ. ವಂಚನೆ: ಬಿಲ್ಡರ್ ಸಂಜಯ್ ಛಾಬ್ರಿಯಾ, ಕಪಿಲ್ ವಾಧ್ವಾನ್ ವಿರುದ್ಧ ಪ್ರಕರಣ ದಾಖಲು

Prasthutha|

ಮುಂಬೈ: ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ 150 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಿಲ್ಡರ್ ಸಂಜಯ್ ಛಾಬ್ರಿಯಾ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್ ಎಫ್ ಎಲ್) ಪ್ರವರ್ತಕ ಕಪಿಲ್ ವಾಧ್ವಾನ್ ವಿರುದ್ಧ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಮಂಗಳವಾರ ಹೊಸ ಪ್ರಕರಣ ದಾಖಲಿಸಿದೆ.

- Advertisement -

ಛಾಬ್ರಿಯಾ ಅವರ ಸಂಸ್ಥೆ ಇಂಡೋ ಗ್ಲೋಬಲ್ ಸಾಫ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ವಾಧ್ವಾನ್ ಅವರ ಡಿಎಚ್ ಎಫ್ ಎಲ್ ನೊಂದಿಗೆ ಶಾಮೀಲಾಗಿ 150 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಈ ಹಣವನ್ನು ಮುಂಬೈನ ಮಹಾಲಕ್ಷ್ಮಿಯಲ್ಲಿ ಪುನರಾಭಿವೃದ್ಧಿ ಯೋಜನೆಗೆ ಬಳಸಲು ಉದ್ದೇಶಿಸಲಾಗಿತ್ತು, ಆದರೆ ಹಣದ ದುರುಪಯೋಗದ ಆರೋಪದಿಂದಾಗಿ, ಈ ಯೋಜನೆ ಇನ್ನೂ ಅಪೂರ್ಣವಾಗಿದೆ ಎಂದು ಇಒಡಬ್ಲ್ಯೂ ತಿಳಿಸಿದೆ.



Join Whatsapp