Home ಟಾಪ್ ಸುದ್ದಿಗಳು 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

ಮೈಸೂರು: ಅಪ್ರಾಪ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸುರಿನ ಸುನ್ನಿಚೌಕ್ ಬಳಿ ನಡೆದಿದೆ.

ಫರ್ವೇಜ್ ಖಾನ್ (17) ಕೊಲೆಯಾದ ಹುಡುಗ. ಆತನನ್ನು 15 ವರ್ಷದ ಬಾಲಕ ಕೊಲೆ ಮಾಡಿದ್ದಾನೆ. ಆಟವಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಫರ್ವೇಜ್ ಖಾನ್‌ಗೆ ಬಾಲಕ ಚಾಕುವಿನಿಂದ ಇರಿದಿದ್ದಾನೆ.

ಚಾಕು ಇರಿತಕ್ಕೊಳಗಾದ ಫರ್ವೇಜ್ ಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪ್ರಾಪ್ತ ಆರೋಪಿಯನ್ನು ಮಂಡಿ ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version