Home ಟಾಪ್ ಸುದ್ದಿಗಳು ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಮೃತ್ಯು

ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಮೃತ್ಯು

ಕವರ್ಧಾ: ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಕವರ್ಧಾದಲ್ಲಿ ನಡೆದಿದೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಬೈಗಾ ಬುಡಕಟ್ಟು ಸಮುದಾಯದ 25-30 ಜನರು ತೆಂಡು ಎಲೆಗಳನ್ನು ತರಲು ಪಿಕಪ್ನಲ್ಲಿ ಹೋಗುತ್ತಿರುವ ಈ ಘಟನೆ ನಡೆದಿದೆ. ಬಹಪಾನಿ ಪ್ರದೇಶದ ಬಳಿ 20 ಅಡಿ ಆಳದ ಕಂದಕಕ್ಕೆ ವಾಹನ ಬಿದ್ದಿದೆ ಎಂದು ಹೇಳಲಾಗಿದೆ.

ಬೈಗಾ ಸಮುದಾಯದವರು ಬೀಡಿ ತಯಾರಿಸುವ ವೃತ್ತಿಯನ್ನು ಮಾಡುತ್ತಿದ್ದರು. ಇದಕ್ಕೆ ತೆಂಡು ಎಲೆಗಳು ಬೇಕಿತ್ತು. ಇದನ್ನು ತರಲು ಪಿಕಪ್ನಲ್ಲಿ ಹೋಗಿದ್ದಾರೆ. ಈ ವೇಳೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ.

Join Whatsapp
Exit mobile version