Home ಟಾಪ್ ಸುದ್ದಿಗಳು ಎನ್ ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ...

ಎನ್ ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ ರವಿ ರಾಣಾ

ಮುಂಬೈ: ಎನ್ ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮಹಾರಾಷ್ಟ್ರ ಶಾಸಕ ರವಿ ರಾಣಾ ಹೇಳಿದ್ದಾರೆ.


ಸರ್ಕಾರ ರಚನೆಯಾದ 15-20 ದಿನದ ಒಳಗಡೆ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಖಚಿತ ಎಂದು ರವಿ ರಾಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರು ಈ ಹಿಂದೆ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆಯವರ ಮಗನಾಗಿರುವುದರಿಂದ ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದರು. ಉದ್ಧವ್ ಈ ಬಾಗಿಲನ್ನು ಬಳಸುತ್ತಾರೆ ಎ ಎಂಬ ವಿಶ್ವಾಸವಿದೆ ಎಂದು ರವಿ ರಾಣಾ ತಿಳಿಸಿದರು.

Join Whatsapp
Exit mobile version