Home ಟಾಪ್ ಸುದ್ದಿಗಳು 144 ಸೆಕ್ಷನ್ ಉಲ್ಲಂಘನೆ: ಬಿಜೆಪಿ ರಾಜ್ಯಾಧ್ಯಕ್ಷ ಬಂಧನ

144 ಸೆಕ್ಷನ್ ಉಲ್ಲಂಘನೆ: ಬಿಜೆಪಿ ರಾಜ್ಯಾಧ್ಯಕ್ಷ ಬಂಧನ

ಕೋಲ್ಕತ್ತಾ: ಗಲಭೆ ಪೀಡಿತ ಹೌರಾ ಜಿಲ್ಲೆಯಲ್ಲಿ ವಿಧಿಸಲಾಗಿದ್ದ 144 ಸೆಕ್ಷನ್ ಉಲ್ಲಂಘಿಸಿ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಪ್ರಯತ್ನಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಇದಕ್ಕೂ ಮೊದಲು, ಹೌರಾಗೆ ಹೋಗದಂತೆ ನ್ಯೂಟೌನ್ ನಲ್ಲಿರುವ ಅವರ ನಿವಾಸದ ಎದುರು ಪೊಲೀಸರು ಮಜುಂದಾರ್ ಅವರನ್ನು ತಡೆದಿದ್ದರು. ತಮ್ಮ ಭೇಟಿಯಿಂದ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುತ್ತದೆ ಎಂದು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಪೊಲೀಸರ ಮಾತನ್ನು ಮೀರಿ ಹೌರಾಗೆ ತೆರಳಲು ಪ್ರಯತ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಹೌರಾಗೆ ಭೇಟಿ ನೀಡುವ ಅವರ ಮೂರನೇ ಪ್ರಯತ್ನದಲ್ಲಿ, ಮಜುಂದಾರ್ ಅವರನ್ನು ವಿದ್ಯಾಸಾಗರ್ ಸೇತು ಟೋಲ್ ಪ್ಲಾಜಾದಲ್ಲಿ ತಡೆದು ಬಂಧಿಸಲಾಯಿತು. ಕಳೆದ ಎರಡು ದಿನಗಳಿಂದ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶನಿವಾರ ಬೆಳಿಗ್ಗೆ ಹೌರಾದ ವಿವಿಧ ಸ್ಥಳಗಳಲ್ಲಿ ಸಿಆರ್ ಪಿಸಿಯ ಸೆಕ್ಷನ್ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಿದೆ.

Join Whatsapp
Exit mobile version