Home ಟಾಪ್ ಸುದ್ದಿಗಳು 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಫುಟ್ಬಾಲ್ ತಂಡ ಇಲ್ಲದಿರುವುದು ಖೇದಕರ:...

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಫುಟ್ಬಾಲ್ ತಂಡ ಇಲ್ಲದಿರುವುದು ಖೇದಕರ: ರಿಯಾಝ್ ಫರಂಗಿಪೇಟೆ

ಮಂಗಳೂರು: ಸುಮಾರು 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಫುಟ್ಬಾಲ್ ತಂಡ ಇಲ್ಲದಿರುವುದು ಖೇದಕರ ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

ಅಬ್ದುಲ್ ರೆಹಮಾನ್ (ಅಂದು) ಇವರ ನೇತೃತ್ವದಲ್ಲಿ SDPI ತಲಪಾಡಿ ಆಯೋಜಿಸಿದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾ ಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಿಯಾಝ್ ಫರಂಗಿಪೇಟೆ ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಯಾವುದೇ ಕ್ಷೇತ್ರ ಇರಲಿ ಸೋಲು ಗೆಲುವಿನ ಚಿಂತನೆ ಮಾಡಬಾರದು, ಸ್ಪರ್ಧಿಸುವ ಧೈರ್ಯ ಉಂಟು ಮಾಡಬೇಕು, ಭಾಗವಹಿಸುವಿಕೆ ಮುಖ್ಯ ಉದ್ದೇಶವಾಗಿರಬೇಕು ಅಲ್ಲದೇ ಕ್ರೀಡಾ ಸ್ಫೂರ್ತಿಯನ್ನು ತೋರಬೇಕು ಎಂಬ ಸಂದೇಶ ನೀಡಿದರು
ಫುಟ್ಬಾಲ್ ಎಂಬುವುದು ಭಾರತ ದೇಶದ ಗಲ್ಲಿ ಗಲ್ಲಿಗಳಲ್ಲಿ ಜನಪ್ರಿಯ ಕ್ರೀಡೆಯಾಗಿ ಗುರುತಿಸುತ್ತಿದೆ ಆದರೆ ಸುಮಾರು 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಒಂದು ತಂಡವಿಲ್ಲದೇ ಇರುವುದಕ್ಕೆ ಖೇದ ವ್ಯಕ್ತಪಡಿಸಿದರು. ಇದಕ್ಕೆ ಆಟಗಾರರಿಗೆ ತರಬೇತಿಯ ಹಾಗೂ ಸೌಲಭ್ಯಗಳ ಕೊರತೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಮಾತನ್ನು ಹೇಳಿದರು.

ಇವರೊಂದಿಗೆ ಈ ಕಾರ್ಯಕ್ರಮದಲ್ಲಿ S4 ಇದರ ಮಾಲಕರಾದ ಮೊಹಮ್ಮದ್ ಕುಂಞ, SDPI ಮಂಜೇಶ್ವರ ಮಂಡಲ ಅಧ್ಯಕ್ಷರಾದ ಆಶ್ರಫ್ ಬಡಾಜೆ, ಉಳ್ಳಾಲ ಫುಟ್ಬಾಲ್ ಅಸೋಸಿಯೇಷನ್ ಇದರ ತರಬೇತುದಾರರಾದ ಸಾಜಿದ್ ಉಳ್ಳಾಲ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಹಮೀದ್ ಹೊಸಂಗಡಿ, ಮುಸ್ಲಿಂ ಒಕ್ಕೂಟ ಉಳ್ಳಾಲ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ್,SDPI ಮುಖಂಡರಾದ ಇಮ್ತಿಯಾಜ್ ಉಳ್ಳಾಲ್, ಶಾಹೀದ್ ಕಿನ್ಯ, ಸಬೀಲ್ ಉಳ್ಳಾಲ್,SDPI ತಲಪಾಡಿ ಗ್ರಾಮಸಮಿತಿ ಅಧ್ಯಕ್ಷರಾದ ಶಕೀಲ್ ಕೆ. ಸಿ ರೋಡ್ ಉಪಸ್ಥಿತರಿದ್ದರು
ಯುನೈಟೆಡ್ ಉಚ್ಚಿಲ ಚಾಂಪಿಯನ್ ಆಗಿ ಮೆರೆದರೆ ನ್ಯೂ ಸ್ಟಾರ್ ಕುಂಜತ್ತೂರು ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿ ಪಟ್ಟಿತು.

Join Whatsapp
Exit mobile version