ಸಕಲೇಶಪುರ ಗಣೇಶೋತ್ಸ ಆಚರಣೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ | 14 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಎಫ್.ಐ.ಆರ್

Prasthutha|

ಸಕಲೇಶಪುರ : ಪೊಲೀಸ್ ಇಲಾಖೆಯ ಅನುಮತಿ ಪಡೆಯದೆ ಸರಕಾರದ ಪರಿಷ್ಕೃತ ಮಾರ್ಗಸೂಚಿ ವಿರುದ್ಧವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡೆಸಿದ್ದಲ್ಲದೇ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 14 ಮಂದಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಸುಮೋಟೊ ಕೇಸ್ ದಾಖಲು ಮಾಡಲಾಗಿದೆ.

ಗಣಪತಿ ಮೂರ್ತಿ ವಿಸರ್ಜನೆಯ ಸಂದರ್ಭದಲ್ಲಿ ಸಬ್‌ಇನ್‌ಸ್ಪೆಕ್ಟರ್ ಬಸವರಾಜ್ ಚಿಂಚೋಳ್ಳಿ ಮನವಿಗೂ ಸ್ಪಂದಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸಂಘಪರಿವಾರದ ಕಾರ್ಯಕರ್ತರಾದ ರಘು ರಾಘವೇಂದ್ರ, ಶ್ರೀಜೀತ್ ಗೌಡ, ಕಾರ್ತಿಕ್, ಕುಶಾಲನಗರ ಬಡಾವಣೆಯ ರಘು, ನಾಗರಾಜ, ಶ್ರೀಕಾಂತ್, ಸದಾನಂದ, ಸದಾ ಹುಲ್ಲಹಳ್ಳಿ ಗ್ರಾಮದ ದೀಪಕ್, ಗುರುಮೂರ್ತಿ ಗುರು, ಪ್ರದೀಪ, ಕೌಡಳ್ಳಿ ಗ್ರಾಮದ ರವಿ ಪೂಜಾರಿ ರವಿ, ಧರ್ಮೇಶ, ಶಿವ ಜಿಪ್ಪಿ ಶಿವ, ಸುಭಾಷ್, ಅಜಾದ್ ರಸ್ತೆಯ ಅಮೃತ್ ಹಾಗೂ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ಯಾವುದೇ ಅನುಮತಿಯನ್ನು ಪಡೆಯದೇ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ವಿಸರ್ಜನೆ ವೇಳೆ ಸರಕಾರದ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಡೋಲು ತಮಟೆಗಳನ್ನು ಬಾರಿಸುತ್ತಾ, ಮಾಸ್ಕ್ ಧರಿಸದೇ, ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘನೆ ಮಾಡಿದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

- Advertisement -