ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸಿಬಿಐ ಮತ್ತು ಇ. ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ 14 ರಾಜಕೀಯ ಪಕ್ಷಗಳು ಶುಕ್ರವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಮನವಿ ಮಾಡಿದರು.
“ಬಂಧನಪೂರ್ವ ಮಾರ್ಗಸೂಚಿ ಮತ್ತು ಅವುಗಳ ಜಾರಿ ಕೋರಿ 14 ರಾಜಕೀಯ ಪಕ್ಷಗಳು ಏಕಕಾಲಕ್ಕೆ ಒಟ್ಟಿಗೆ ಬಂದಿವೆ. ಸಿಬಿಐ ಮತ್ತು ಇ ಡಿಗಳನ್ನು ಇಂದು ನಮ್ಮ ವಿರುದ್ಧ ಬಳಕೆ ಮಾಡಲಾಗುತ್ತಿದೆ. ಶೇ. 95ರಷ್ಟು ತನಿಖೆಯಲ್ಲಿ ವಿರೋಧ ಪಕ್ಷಗಳ ನಾಯಕರೇ ಸೇರಿದ್ದಾರೆ” ಎಂದು ಸಿಂಘ್ವಿ ಹೇಳಿದರು. ಇದನ್ನು ಆಲಿಸಿದ ಸಿಜೆಐ ಚಂದ್ರಚೂಡ್ ಅವರು ಪ್ರಕರಣವನ್ನು ಏಪ್ರಿಲ್ 5ಕ್ಕೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಆರ್’ಜೆಡಿ ಪಕ್ಷಗಳು ಬಂಧನಪೂರ್ವ ಮಾರ್ಗಸೂಚಿ ರೂಪಿಸುವಂತೆ ಅರ್ಜಿಯಲ್ಲಿ ಕೋರಿವೆ