ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪ ಕೇಳಿ ಬಂದಿರುವುದರ ಹೊರತಾಗಿಯೂ, ಲಾಡು ಮಾರಾಟದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.
ದೇವಸ್ಥಾನಕ್ಕೆ ಪ್ರತಿದಿನ 60,000 ಭಕ್ತರು ಭೇಟಿ ನೀಡುತ್ತಾರೆ. ಕಳೆದ ನಾಲ್ಕು ದಿನಗಳಲ್ಲಿ 14 ಲಕ್ಷಕ್ಕೂ ಅಧಿಕ ಲಾಡು ಮಾರಾಟವಾಗಿದೆ ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.
ತಿರುಪತಿಯಲ್ಲಿ ಪ್ರಸಾದ ರೂಪದಲ್ಲಿ ನಿತ್ಯವೂ ಸರಾಸರಿ 3.5 ಲಕ್ಷ ಲಾಡು ಮಾರಾಟವಾಗುತ್ತವೆ. ಕಳೆದ ನಾಲ್ಕು ದಿನದಲ್ಲಿ ಮಾರಾಟವಾಗಿರುವ ಲಾಡುಗಳ ಸರಾಸರಿಯೂ ಅದಕ್ಕೆ ಸರಿಸಮನಾಗಿಯೇ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
‘ನಮ್ಮ ಭಕ್ತಿಯು, ಯಾರಿಂದಲೂ ಅಲುಗಾಡಿಸಲಾಗದಷ್ಟು ಬಲವಾಗಿದೆ’ ಎಂದು ವೆಂಕಟೇಶ್ವರ ರಾವ್ ಎಂಬ ಭಕ್ತರೊಬ್ಬರು ಹೇಳಿರುವುದಾಗಿ ಬರೆಯಲಾಗಿದೆ.

ತಿರುಪತಿಯಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಲಾಡು ತಯಾರಿಸಲಾಗುತ್ತದೆ. ಅದಕ್ಕಾಗಿ ಸುಮಾರು 15 ಟನ್ನಷ್ಟು ಹಸುವಿನ ತುಪ್ಪ ಬಳಸಲಾಗುತ್ತದೆ.