Home ಟಾಪ್ ಸುದ್ದಿಗಳು ಬಿರಿಯಾನಿಯ ಹಣ ಕೇಳಿದಾಗ ಕೋಮು ಗಲಭೆ ನಡೆಸುವುದಾಗಿ ಬೆದರಿಕೆ; ಬಿಜೆಪಿ ಕಾರ್ಯಕರ್ತರ ಬಂಧನ

ಬಿರಿಯಾನಿಯ ಹಣ ಕೇಳಿದಾಗ ಕೋಮು ಗಲಭೆ ನಡೆಸುವುದಾಗಿ ಬೆದರಿಕೆ; ಬಿಜೆಪಿ ಕಾರ್ಯಕರ್ತರ ಬಂಧನ

ತಿಂದ ಬಿರಿಯಾನಿಯ ಹಣ ಕೇಳಿದಾಗ ಕೋಮು ಗಲಭೆ ನಡೆಸುವುದಾಗಿ ಹೋಟೇಲ್ ಮಾಲೀಕರಿಗೆ ಬೆದರಿಕೆ ಹಾಕಿದ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ತಿಂದ ಬಿರಿಯಾನಿಯ ಹಣ ಕೇಳಿದಾಗ ಅಮಿತ್ ಷಾ ಅವರ ಸಹಾಯಕರನ್ನು ಕರೆದು ಕೆಲವೇ ನಿಮಿಷಗಳಲ್ಲಿ ಗಲಭೆ ನಡೆಸಿ ಕೊಲೆ ಮಾಡುವುದಾಗಿ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದರು. ಮೂವರೂ ಮದ್ಯದ ಅಮಲಿನಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ ನಂತರ ಐಸ್ ಹೌಸ್ ಠಾಣೆಯ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಟ್ರಿಪ್ಲಿಕನ್ ವೆಸ್ಟ್  ಕ್ಷೇತ್ರದ ಕಾರ್ಯದರ್ಶಿ ಭಾಸ್ಕರ್, ಅಧ್ಯಕ್ಷ ಪುರುಷೋತ್ತಮನ್ ಮತ್ತು ಅವರ ಸ್ನೇಹಿತ ಸೂರ್ಯ ಅವರನ್ನು ಬಂಧಿಸಲಾಗಿದೆ. ಕೊಲೆ ಬೆದರಿಕೆ ಹಾಕಿರುವುದಕ್ಕಾಗಿ ಮತ್ತು ಹಾನಿಯನ್ನುಂಟು ಮಾಡಿರುವುದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳೆದ ರಾತ್ರಿ ಚೆನ್ನೈನ ಐಸ್ ಹೌಸ್ ಮುತ್ತಯ್ಯ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಮೂವರು ತಡ ರಾತ್ರಿ ಮುಹಮ್ಮದ್ ಅಬೂಬಕ್ಕರ್ ಅವರ ಹೋಟೆಲ್ ಗೆ ಆಗಮಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಅವರು ಬಿರಿಯಾನಿ ಕೇಳಿದಾಗ ಅಂಗಡಿ ಮುಚ್ಚುವ ಸಮಯವಾಗಿದೆ ಎಂದು ಸಿಬ್ಬಂದಿಗಳು ಹೇಳಿದರೂ ಬಿರಿಯಾನಿ ರೆಡಿ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಊಟದ ನಂತರ ಬಿಲ್ ಪಾವತಿಸಲು ಕೇಳಿಕೊಂಡಾಗ ಅವರು ಪಾವತಿಸಲು ನಿರಾಕರಿಸಿದ್ದಾರೆ. ಅದನ್ನು ಪ್ರಶ್ನಿಸಿದ ಅಬೂಬಕ್ಕರ್ ಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.

“ಕೇಂದ್ರ ಸಚಿವ ಅಮಿತ್ ಷಾ ಅವರ ವೈಯಕ್ತಿಕ ಕಾರ್ಯದರ್ಶಿಯನ್ನು ಕರೆಯುವುತ್ತೇವೆ. ನಾವು ಕರೆದರೆ ಸಾವಿರಾರು ಜನರು ಬಂದು ಕೋಮು ಗಲಭೆ ನಡೆಸಲು ಸಿದ್ಧರಿದ್ದಾರೆ. ನಿಮ್ಮ ಹೋಟೆಲ್ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ” ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ.

Join Whatsapp
Exit mobile version