Home ಟಾಪ್ ಸುದ್ದಿಗಳು ಹರ್ಯಾಣ ಸಿಎಂ ಖಟ್ಟರ್ ಬೆಂಗಾವಲು ವಾಹನಕ್ಕೆ ಮುತ್ತಿಗೆ ಹಾಕಿದ ರೈತರ ವಿರುದ್ಧ ಕೊಲೆಯತ್ನ ಕೇಸ್

ಹರ್ಯಾಣ ಸಿಎಂ ಖಟ್ಟರ್ ಬೆಂಗಾವಲು ವಾಹನಕ್ಕೆ ಮುತ್ತಿಗೆ ಹಾಕಿದ ರೈತರ ವಿರುದ್ಧ ಕೊಲೆಯತ್ನ ಕೇಸ್

ಅಂಬಾಲ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಕೆಲವರು, ಹರ್ಯಾಣ ಮುಖ್ಯಮಂತ್ರಿ ಮೋಹನ್ ಲಾಲ್ ಖಟ್ಟರ್ ರ ಬೆಂಗಾವಲು ವಾಹನಕ್ಕೆ ಮುತ್ತಿಗೆ ಹಾಕಿದುದಕ್ಕೆ ಸಂಬಂಧಿಸಿ ಕೊಲೆಯತ್ನದಂತಹ ಕಠಿಣ ಕೇಸ್ ಗಳನ್ನು ಹಾಕಿರುವುದು ವ್ಯಾಪಕ ಆಕ್ರೊಶಕ್ಕೆ ಕಾರಣವಾಗಿದೆ. ಸಿಎಂ ಬೆಂಗಾವಲು ವಾಹನಕ್ಕೆ ಮುತ್ತಿಗೆ ಹಾಕಿದ 13 ಮಂದಿ ರೈತರ ವಿರುದ್ಧ ಕೊಲೆಯತ್ನ, ಗ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಂಬಾಲದಲ್ಲಿ ಮಂಗಳವಾರ ಸಿಎಂ ಖಟ್ಟರ್ ಹೋಗುವಾಗ ಕೆಲವು ಪ್ರತಿಭಟನಕಾರ ರೈತರು ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಖಟ್ಟರ್ ಅಂಬಾಲಕ್ಕೆ ಬಂದಿದ್ದರು.

ಸರಕಾರದ ಕ್ರಮದ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನಾಯಕಿ ಕುಮಾರಿ ಶೆಲ್ಜಾ, ರೈತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಸರಕಾರ ತನ್ನ ಎಲ್ಲಾ ಮಿತಿಗಳನ್ನು ದಾಟಿದೆ ಎಂದಿದ್ದಾರೆ.

Join Whatsapp
Exit mobile version