Home ಟಾಪ್ ಸುದ್ದಿಗಳು 1257 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ: ಹಿಮಾಂಶು ವರ್ಮಾ ಬಂಧನ

1257 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ: ಹಿಮಾಂಶು ವರ್ಮಾ ಬಂಧನ

ಜೈಪುರ: ಸಿಂಡಿಕೇಟ್ ಬ್ಯಾಂಕಿಗೆ 1257 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಹಿಮಾಂಶು ವರ್ಮಾರನ್ನು ಅಕ್ಟೋಬರ್ 15ರಂದು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ವಿಶೇಷ ನ್ಯಾಯಾಲಯ ಹಿಮಾಂಶು ವರ್ಮಾ ಅವರನ್ನು ಅಕ್ಟೋಬರ್ 25 ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.

ಅಲ್ಲದೆ, ಅವರ 14.88 ಕೋಟಿ ರೂ. ಮೌಲ್ಯದ ವಿವಿಧ ಆಸ್ತಿಗಳನ್ನು ಜಫ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

https://twitter.com/ANI/status/1581970077410242561
Join Whatsapp
Exit mobile version