ಲಾಹೋರ್: ಪಾಕಿಸ್ತಾನದ ಲಾಹೋರ್ ನಲ್ಲಿ 1200 ವರ್ಷಗಳಷ್ಟು ಹಿಂದಿನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಪುನರ್ ನಿರ್ಮಿಸಲಾಗುವುದು ಎಂದು ಅಲ್ಪಸಂಖ್ಯಾತ ಆರಾಧನಾ ಸ್ಥಳಗಳ ನಿರ್ವಹಣಾ ಸಂಸ್ಥೆಯಾದ ದಿ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಹೇಳಿದೆ.
ಈ ಮಧ್ಯೆ ಇವಾಕ್ಯೂ ಟ್ರಸ್ಟ್ ಕಳೆದ ತಿಂಗಳು ಲಾಹೋರ್ ನಲ್ಲಿರುವ ಐತಿಹಾಸಿಕ ಅನಾರ್ಕಲಿ ಬಝಾರ್ ಸಮೀಪದಲ್ಲಿರುವ ವಾಲ್ಮೀಕಿ ದೇವಸ್ಥಾನವನ್ನು ಕ್ರಿಶ್ಚಿಯನ್ ಕುಟುಂದದಿಂದ ವಾಪಸು ಪಡೆದಿದೆ. ಕೃಷ್ಣ ದೇವಾಲಯದ ಸಮೀಪದ ವಾಲ್ಮೀಕಿ ದೇವಸ್ಥಾನವು ಏಕೈಕ ದೇವಸ್ಥಾನವೆಂಬ ಖ್ಯಾತಿಗೆ ಪಾತ್ರವಾಗಿದೆ.
ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇವೆ ಎಂದು ಹೇಳುವ ಕ್ರಿಶ್ಚಿಯನ್ ಕುಟುಂಬ ವಶಕ್ಕೆ ಪಡೆದು ಕಳೆದ ಎರಡು ದಶಕಗಳ ಅವಧಿಯಲ್ಲಿ ವಾಲ್ಮೀಕಿ ಜಾತಿಗಳಿಗೆ ಮಾತ್ರ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು.
ಮುಂದಿನ ದಿನಗಳಲ್ಲಿ ವಾಲ್ಮೀಕಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ಮತ್ತೆ ನಿರ್ಮಿಸಲಾಗುವುದು ಎಂದು ಇವಾಕ್ಯೂ ಟ್ರಸ್ಟ್ ವಕ್ತಾರ ಅಮೀರ್ ಹಶ್ಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.