12-14 ವಯೋಮಾನದ ಮಕ್ಕಳಿಗೆ ಮಾರ್ಚ್ ನಲ್ಲಿ ಲಸಿಕೆ ಪ್ರಾರಂಭ
Prasthutha: January 17, 2022

ಹೊಸದಿಲ್ಲಿ: ದೇಶದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ನೀಡಲಿರುವ ಲಸಿಕಾ ಕಾರ್ಯಾಗಾರವು ಮಾರ್ಚ್ ವೇಳೆಗೆ ಆರಂಭವಾಗಲಿದೆ ಎಂದು ಲಸಿಕೆ ಕುರಿತ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ.ಅರೋರಾ ಹೇಳಿದ್ದಾರೆ.
ಜನವರಿ 3ರಂದು ದೇಶದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಯನ್ನು ಪ್ರಾರಂಭಿಸಲಾಯಿತು. ಪ್ರಥಮ ಡೋಸ್ ಲಸಿಕೆ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಎರಡನೇ ಡೋಸ್ ಪೂರೈಕೆ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ.
ದೇಶದಲ್ಲಿ ಲಸಿಕೆ ವಿತರಣೆಯ ಒಂದು ವರ್ಷದ ನೆನಪಿಗಾಗಿ ಕೇಂದ್ರ ಸರ್ಕಾರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವ್ಯ ಅವರು ಸ್ಟಾಂಪ್ ಬಿಡುಗಡೆ ಮಾಡಿದರು.
ಲಸಿಕೆಗಳ ವಿತರಣೆಯಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
