ಯು.ಎ.ಇ ಸರಕಾರವು ಮುಂದಿನ ಸೂಚನೆ ಬರುವವರೆಗೂ, ಸಂದರ್ಶಕರಿಗೆ ಪಾಕಿಸ್ತಾನ ಸೇರಿದಂತೆ ಇತರ 11 ದೇಶಗಳಿಗೆ ಹೊಸ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಹೊರತಾಗಿ, ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬ್ಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಸಂದರ್ಶನ ವೀಸಾಗಳನ್ನು ಯುಎಇ ಸರಕಾರ ಅಮಾನತುಗೊಳಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ಈ ಬೆಳವಣಿಗೆ ಬಂದಿದೆ. ಸುಮಾರು ಒಂದು ವಾರದಿಂದ ಪಾಕಿಸ್ತಾನದಲ್ಲಿ 2,000ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಜೂನ್ ನಲ್ಲಿ, ಪಾಕಿಸ್ತಾನದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಯು.ಎ.ಇ ಸರಕಾರವು ಪ್ರಯಾಣಿಕರ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು.