Home ಟಾಪ್ ಸುದ್ದಿಗಳು ಒಡಿಶಾ ರೈಲು ಅಪಘಾತ: ಚಿಕ್ಕಮಗಳೂರಿನಿಂದ ತೆರಳಿದ್ದ 110 ಕನ್ನಡಿಗರು ಸೇಫ್

ಒಡಿಶಾ ರೈಲು ಅಪಘಾತ: ಚಿಕ್ಕಮಗಳೂರಿನಿಂದ ತೆರಳಿದ್ದ 110 ಕನ್ನಡಿಗರು ಸೇಫ್

ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ಸರಣಿ ಅಪಘಾತ ಸಂಭವಿಸಿದ್ದು, ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚೆನ್ನೈ-ಕೊರೊಮಂಡಲ್ ಎಕ್ಸ್ ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತವಾಗಿದೆ. ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, 12841 ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಈ ದುರಂತ ನಡೆದ ಸಂದರ್ಭದಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಳಸದ 110 ಮಂದಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದು, ಅಪಘಾತದಲ್ಲಿ 110 ಮಂದಿಯೂ ಬಚಾವ್ ಆಗಿದ್ದಾರೆ.

Join Whatsapp
Exit mobile version