ಪಿಎಸ್ಐ ನೇಮಕಾತಿ ಅಕ್ರಮ: 11 ಪೊಲೀಸ್ ಸಿಬ್ಬಂದಿ ಸಸ್ಪೆಂಡ್

Prasthutha|

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ‌ಸಿಐಡಿ ಅಧಿಕಾರಿಗಳು ‌ಪರೀಕ್ಷಾ ಕೇಂದ್ರದ ಕರ್ತವ್ಯದಲ್ಲಿದ್ದ ಕಲಬುರಗಿಯ ವಿವಿಧ ಠಾಣೆಗಳ 11 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

- Advertisement -


ಪಿಎಸ್ಐ ಪರೀಕ್ಷಾ ಕೇಂದ್ರದ ಕರ್ತವ್ಯದಲ್ಲಿದ್ದ ಸ್ಟೇಷನ್ ಬಜಾರ್ ಠಾಣೆಯ ಮೂವರು, ಮಹಿಳಾ ಠಾಣೆಯ 8 ಸಿಬ್ಬಂದಿ ಅಮಾನತುಗೊಳಿಸಿ‌ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಿಎಸ್‌ಐ ನೇಮಕಾತಿ ಅಕ್ರಮದ ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ಬಲೆ ಬೀಸಿರುವ ಸಿಐಡಿ ಅಧಿಕಾರಿಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಒಂದಲ್ಲ ಒಂದು ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ.


ಬ್ಯಾಂಕ್ ಖಾತೆ ಫ್ರೀಜ್:
ಅಕ್ರಮದ ಬ್ಲೂಟೂತ್ ಕಿಂಗ್‌ಪಿನ್ ಆರ್.ಡಿ‌. ಪಾಟೀಲ್‌ಗೆ ಸೇರಿದ ಬ್ಯಾಂಕ್ ಅಕೌಂಟ್​ಗಳನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಇತರೆ ಬ್ಯಾಂಕ್​ಗಳಲ್ಲಿರುವ ಖಾತೆಗಳನ್ನು ಸಿಐಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಪಿಎಸ್​ಐ ನೇಮಕಾತಿ ಪರೀಕ್ಷೆಯ ಅಕ್ರಮದಿಂದ ಕೋಟ್ಯಾಂತರ ಆಸ್ತಿಯನ್ನು ಆರ್.ಡಿ‌. ಪಾಟೀಲ್‌ ಸಂಪಾದಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಕೌಂಟ್ ಫ್ರೀಜ್​ ಮಾಡಲಾಗಿದೆ.

- Advertisement -


ಈತ ತನ್ನ ಆಪ್ತರ ಹೆಸರಿನಲ್ಲೂ ಬೇನಾಮಿ ಆಸ್ತಿ ಮಾಡಿರುವ ಶಂಕೆಯಿದ್ದು. ಈ ನಿಟ್ಟಿನಲ್ಲೂ ಸಿಐಡಿ ತಂಡ ತನಿಖೆ ಕೈಗೊಂಡಿದೆ.
ಈ‌ ಮಧ್ಯೆ ಬಂಧಿತ ಆರ್.ಡಿ. ಪಾಟೀಲ್ ಸಿಐಡಿ ಕಸ್ಟಡಿ ಸಮಯಾವಕಾಶ ಮುಕ್ತಾಯವಾಗಿದ್ದು ಮತ್ತೆ ಎರಡು ದಿನಗಳ ಕಾಲ ಕಸ್ಟಡಿ ವಿಸ್ತರಣೆ ಮಾಡಿ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ.

Join Whatsapp
Exit mobile version