ಟೋಕಿಯೋ: ಜಪಾನ್‌ನಲ್ಲಿ 108 ವರ್ಷ ವಯಸ್ಸಿನ ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿಗಳಾಗಿದ್ದಾರೆ.
1913 ನವೆಂಬರ್ 5ರಂದು ಜನಿಸಿದ ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮ ಎಂಬ ಹೆಸರಿನ ಈ ಹಿರಿಯ ಅವಳಿ ಜಪಾನ್‌ನ ವಯಸ್ಕರ ದಿನದಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. ಅವರು ವಿಶ್ವದ ಅತ್ಯಂತ ಹಿರಿಯ ಅವಳಿ ಎಂಬ ಪ್ರಮಾಣಪತ್ರವನ್ನೂ ಪಡೆದಿದ್ದಾರೆ.
ಶೋಡೋಶಿಮಾದಲ್ಲಿ ಜನಿಸಿದ ಇವರು ಜಪಾನ್‌ನ ಕಿನ್ ನರಿತಾ-ಜಿನ್ ಕಾನಿ ಸಹೋದರಿಯರ 107 ವರ್ಷ 175 ದಿನಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.