ಹಣ, ಹುದ್ದೆ ಪಡೆಯುವ ಉದ್ದೇಶದಿಂದ ಅಂಬಾನಿ ಮನೆ ಮುಂಭಾಗ ಕಾರ್ ಬಾಂಬ್ ಸ್ಫೋಟ: 10,000 ಪುಟಗಳ ಚಾರ್ಜ್ ಶೀಟ್ ನಲ್ಲಿ ಹೇಳಿಕೆ

Prasthutha|

ಮುಂಬೈ: ಮುಖೇಶ್ ಅಂಬಾನಿ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಆರ್ಥಿಕ ಲಾಭ ಪಡೆಯುವುದು ಮತ್ತು ಎನ್ ಕೌಂಟರ್ ಸ್ಪೆಷಲಿಸ್ಟ್ ಹುದ್ದೆ ಪಡೆಯುವ ಗುರಿ ಇತ್ತೆಂದು ಎನ್ ಐಎ- ರಾಷ್ಟ್ರೀಯ ತನಿಖಾ ದಳವು ಸಲ್ಲಿಸಿರುವ 10,000 ಪುಟಗಳ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.


ಚಾರ್ಜ್ ಶೀಟ್ ನಲ್ಲಿ ಹೇಗೆ ಧನ ಲಾಭ ಮಾಡಿಕೊಳ್ಳುವುದು ಎಂಬುದನ್ನು ವಿವರಿಸಿಲ್ಲ. ದೊಡ್ಡ ಸಂಚಿನ ಭಯದಲ್ಲಿ ದೊಡ್ಡ ಮಟ್ಟದ ತನಿಖೆ ನಡೆಯುವಂತೆ ಮಾಡುವುದು ಎನ್ನಲಾಗಿದೆ. ಈ ಕೇಸಿನಲ್ಲಿ ಬಂಧನಕ್ಕೊಳಗಾದ ಹತ್ತು ಜನರಲ್ಲಿ ಐವರು ವಜಾ ಆದ ಮಾಜಿ ಪೊಲೀಸ್ ಅಧಿಕಾರಿಗಳು. ಚಾರ್ಜ್ ಶೀಟ್ ನಲ್ಲಿ ತಪ್ಪಿಸಿಕೊಂಡ ಇಲ್ಲವೇ ಸಂಶಯಿತ ಎಂದು ಯಾರ ಹೆಸರನ್ನೂ ಸೂಚಿಸಿಲ್ಲ. ಇಡೀ ಸಂಚಿನಲ್ಲಿ ಇತರರ ಪಾತ್ರವು ಅಂಟಿಸಿಟ್ಟಂತೆ ಇದೆ.

- Advertisement -


ಕೊಲೆಯ ಸಂಚು ಸೇರಿ ಎಲ್ಲ ಆರೋಪಿಗಳ ವಿರುದ್ಧ ಎನ್ ಐಎ 17 ಆರೋಪಗಳನ್ನು ಪಟ್ಟಿ ಮಾಡಿದೆ. ಥಾಣೆಯ ಮನ್ ಸುಖ್ ಹಿರನ್ ಅವರು ಸುವ್ ವಾಹನಕ್ಕೆ ಸಂಬಂಧಿಸಿದವರು ಮತ್ತು ಸಾಕ್ಷ್ಯ ನಾಶ, ಉಗ್ರ ಚಟುವಟಿಕೆ, ಕಾನೂನು ಬಾಹಿರವಾಗಿ ಉಗ್ರ ಕೆಲಸಕ್ಕೆ ನೇಮಕ ಮಾಡಿಕೊಂಡ ಆರೋಪ ಅವರ ಮೇಲಿದೆ. ಈ ಸಂಚು ಫೆಬ್ರವರಿ ಮಧ್ಯಾವಧಿಯಿಂದ ಮಾರ್ಚ್ 4ರವರೆಗೆ ನಡೆದಿದೆ ಎಂದು ತಿಳಿಸಲಾಗಿದೆ.


ಫೆಬ್ರವರಿ 16ರಿಂದ 20ರವರೆಗೆ ದಕ್ಷಿಣ ಮುಂಬಯಿಯ ಒಬೇರಾಯ್ ಹೋಟೆಲಲ್ಲಿ ತಂಗಿ 100 ರಾತ್ರಿಗಳು ಎಂಬ ಒಂದು ಕಾಲ್ಪನಿಕ ಹೆಸರಿನಲ್ಲಿ ಸಂಚು ರೂಪಿಸಲಾಗಿತ್ತು. ಸಂಚಿಗೆ ಬಳಸಿದ ಸ್ಕಾರ್ಪಿಯೋವನ್ನು ಫೆಬ್ರವರಿ 17ರಂದು ಹಿರನ್ ಮೂಲಕ ಕದಿಯಲಾಗಿತ್ತು ಎನ್ನಲಾಗಿದೆ. ಅದನ್ನು ತೆಂಕಣ ಮುಂಬಯಿಗೆ ಹಿರನ್ ತರುವಾಗ ಸ್ಟೀರಿಂಗ್ ಜಾಮ್ ಆದುದರಿಂದ ಹೆದ್ದಾರಿಯಲ್ಲಿ ಬಿಡಲಾಗಿತ್ತು. ಅಲ್ಲಿಗೂ ಅದನ್ನು ಸಂಚುಕೋರರ ಗುಂಪು ಫೆಬ್ರವರಿ 25ರಂದು ಬಳಸಿಕೊಂಡಿತು. ಹೆದ್ದಾರಿಯಿಂದ ದಕ್ಷಿಣ ಮುಂಬಯಿಗೆ ಹಿರನ್ ರನ್ನು ಓಲಾ ಚಾಲಕನೊಬ್ಬ ಕರೆತಂದಿದ್ದ. ಸಿಸಿಟೀವಿ ದೃಶ್ಯಗಳ ಪ್ರಕಾರ ಪೊಲೀಸ್ ಕೇಂದ್ರ ಕಚೇರಿಯ ಬಳಿ ಇಳಿದ ಹಿರನ್ ಒಂದಷ್ಟು ದೂರ ನಡೆದಿದ್ದಾರೆ.


ಸ್ಕಾರ್ಪಿಯೋಗೆ ಬಳಸಿದ ನಕಲಿ ನಂಬರ್ ಪ್ಲೇಟ್ ಸಂಖ್ಯೆಯು ಅಂಬಾನಿಯವರ 47 ಬೆಂಗಾವಲು ವಾಹನಗಳಲ್ಲಿ ಒಂದರದ್ದಾಗಿತ್ತು. ಅಂಬಾನಿ ಕುಟುಂಬಕ್ಕೆ ನೇರ ಭೀತಿ ಒಡ್ಡಲು ಇದನ್ನು ಬಳಸಲಾಗಿದೆ ಎಂದು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಹೇಳಿದೆ. ಜೈಶ್ ಉಲ್ ಹಿಂದ್ ಹೆಸರಿನಲ್ಲಿ ನಾವಿದಕ್ಕೆ ಜವಾಬ್ದಾರರು ಎಂದ ಟೆಲಿಗ್ರಾಂ ಚಾನೆಲ್ ಒಂದು ಟ್ರೇಲರ್ ಅಷ್ಟೆ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಇದು ಸ್ಪಷ್ಟವಾಗಿ ಹಣ ಹೊಡೆಯುವ ಗುರಿ ಹೊಂದಿದ್ದನ್ನು ಸೂಚಿಸುತ್ತದೆ. ಹಿರನ್ ಬಳಿಗೆ ತಲುಪಿದ ತನಿಖಾ ತಂಡವು ಅವರ ಕುಟುಂಬದವರಿಂದಲೂ ಹೇಳಿಕೆ ಪಡೆದಿದೆ. ಆದರೆ ಹಿರನ್ ಆ ಸಂಚಿನ ಗುಂಪಿನಲ್ಲಿ ಇದ್ದುದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅನಂತರ ಹಿರನ್ ಮಾಧ್ಯಮ ಮತ್ತು ಪೊಲೀಸರು ನೀಡಿದ ಮಾನಸಿಕ ಹಿಂಸೆಯಿಂದ ನೊಂದಿರುವುದಾಗಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಥವಾ ಕೊಲೆಯಾಗಿದ್ದಾರೆ.


ಮಾರ್ಚ್ 5ರಂದು ಮುಂಬ್ರಾ ಕಡಲ್ಗಾಲುವೆಯಲ್ಲಿ ಹಿರನ್ ಶವ ಮೇಲೆತ್ತಲಾಗಿತ್ತು. ಕಲ್ವಾ ಆಸ್ಪತ್ರೆಗೆ ಶವ ಪರೀಕ್ಷೆ ನಡೆಸಲಾಗಿತ್ತು.

- Advertisement -