Home ಜಾಲತಾಣದಿಂದ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ| ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ ಬುಕ್ಕಿಂಗ್!

ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ| ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ ಬುಕ್ಕಿಂಗ್!

► ಮೇ 5ರಿಂದ 13ರ ವರೆಗೂ ಪ್ರಯಾಣಿಕರನ್ನು ಕಾಡಲಿದೆ ಬಸ್‌ಗಳ ಕೊರತೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕಾರ್ಯಕ್ಕೆ ಬೇಕಾದ ಬಸ್​ಗಳ ವ್ಯವಸ್ಥೆಗೆ ಚುನಾವಣಾ ಅಧಿಕಾರಿಗಳು ಈಗಾಗಲೇ ಬುಕಿಂಗ್ ಮಾಡಿಕೊಳ್ಳುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ಸುಗಳನ್ನು ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಬಸ್‌ ಕೊರತೆ ಉಂಟಾದಲ್ಲಿ ಪ್ರಯಾಣಿಕರ ಸಂಚಾರಕ್ಕೂ ಬಿಸಿ ತಟ್ಟಲಿದೆ.

ಚುನಾವಣಾ ಅಧಿಕಾರಿಗಳು ಚುನಾವಣೆ​ಗೆ ಬೇಕಾದ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದು, ಎಲೆಕ್ಷನ್ ಸಿದ್ದತೆಗೆ ಬೇಕಾದ ಸಾರಿಗೆ ವ್ಯವಸ್ಥೆಗೆ ರಾಜ್ಯಾದ್ಯಂತ ಅಂದಾಜು 10 ಸಾವಿರ ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಆರ್​ಟಿಒ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಈ ಬಾರಿ ಮೇ 5 ರಿಂದ ಮೇ 13 ರ ವರೆಗೂ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯಕತೆ ಇರುತ್ತದೆ.‌ ಹೀಗಾಗಿ ಚುನಾವಣಾ ಅಧಿಕಾರಿಗಳು ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳನ್ನ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸರ್ಕಾರಿ ಬಸ್ಸುಗಳನ್ನು ಪೊಲೀಸ್ ಇಲಾಖೆ, ಬಿಬಿಎಂಪಿ, ಆರ್​ಟಿಒ, ಸಾರಿಗೆ ಇಲಾಖೆಗಳ ಸಿಬ್ಬಂದಿಗೆ ಪಿಕಪ್-ಡ್ರಾಪ್ ಹಾಗೂ ಹಲವು ಚುನಾವಣಾ ಕೆಲಸಗಳ ನಿಮಿತ್ತ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಈ ಬಸ್ಸುಗಳನ್ನ ಮೇ 5 ರಿಂದ ಮೇ 13 ರವರೆಗೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಬಸ್ಸುಗಳ ಕೊರತೆಯಾಗುವ ಸಾಧ್ಯತೆಗಳಿವೆ.

Join Whatsapp
Exit mobile version