Home ಕರಾವಳಿ ಹೋಟೆಲ್ ತ್ಯಾಜ್ಯ ಬಿಸಾಡಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಿದ ಅಡ್ಯಾರ್ ಗ್ರಾ.ಪಂ.

ಹೋಟೆಲ್ ತ್ಯಾಜ್ಯ ಬಿಸಾಡಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಿದ ಅಡ್ಯಾರ್ ಗ್ರಾ.ಪಂ.

ಮಂಗಳೂರು: ತ್ಯಾಜ್ಯ ಬಿಸಾಡಿದ್ದಕ್ಕೆ ಹೋಟೆಲ್ ಗೆ 10,000 ರೂ ದಂಡ ವಿಧಿಸಿದ ಘಟನೆ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.


ಹೋಟೆಲ್ ಸಿಬ್ಬಂದಿ ತ್ಯಾಜ್ಯವನ್ನು ರಸ್ತೆ ಬದಿಗೆ ಹಾಕುತ್ತಿದ್ದಾಗ ಗ್ರಾಮ ಪಂಚಾಯತ್ ಅಧ್ಯಕ್ಷರು ಪಿಡಿಒ ಮತ್ತು ಸಿಬ್ಬಂದಿ ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಹೋಟಲ್ ನ ತ್ಯಾಜ್ಯ ಅಲ್ಲವೇ ಅಲ್ಲವೆಂದು ವಾದ ಮಾಡಿದ್ದಾರೆ. ಬಳಿಕ ತ್ಯಾಜ್ಯವನ್ನು ಪರಿಶೀಲಿಸಿದಾಗ ಅದರಲ್ಲಿ ಸಂಬಂಧಪಟ್ಟ ಅದೇ ಹೋಟೆಲ್ ನ ಬಿಲ್ ಇರುವುದು ಪತ್ತೆಯಾಗಿದೆ. ತಕ್ಷಣ ಹೋಟೆಲ್ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಲಾಯಿತು.


ಮುಂದಿನ ದಿನಗಳಲ್ಲಿ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವುದು ಕಂಡು ಬಂದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದೆ.

Join Whatsapp
Exit mobile version