Home ಟಾಪ್ ಸುದ್ದಿಗಳು ನವೀನ್ ಮೃತದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆ ತರಬಹುದು: ಶಾಸಕ ಅರವಿಂದ ಬೆಲ್ಲದ್ ಬೇಜವಾಬ್ದಾರಿ...

ನವೀನ್ ಮೃತದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆ ತರಬಹುದು: ಶಾಸಕ ಅರವಿಂದ ಬೆಲ್ಲದ್ ಬೇಜವಾಬ್ದಾರಿ ಹೇಳಿಕೆ

ಧಾರವಾಡ: ಖಾರ್ಕಿವ್‌ ನಲ್ಲಿ ರಷ್ಯಾದ ಪಡೆಗಳ ಶೆಲ್ ದಾಳಿಯಲ್ಲಿ ಮೃತರಾದ ನವೀನ್ ಜ್ಞಾನ ಗೌಡರ್ ಅವರ ದೇಹವನ್ನು ಮರಳಿ ತರುವ ಬದಲು 10 ಜನರನ್ನು ವಿಮಾನದಲ್ಲಿ ಸ್ಥಳಾಂತರಿಸಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್​ ಶವ ತರಲು ಪ್ರಯತ್ನ ಮಾಡುತಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ನಡೆಯುತ್ತಿದೆ, ಈ ಬಗ್ಗೆ ಮಾದ್ಯಮದವರೇ ಅದನ್ನು ತೊರಿಸುತಿದ್ದಾರೆ. ಜೀವಂತ ಇದ್ದವರನ್ನೇ ತರುವದು ಕಷ್ಟ ಆಗಿದೆ, ಶವ‌ ತರೋದು ಇನ್ನೂ ಕಷ್ಟ ಇದೆ. ವಿಮಾನದಲ್ಲಿ ಶವ ತರಲು ಹೆಚ್ಚು ಜಾಗ‌ಬೇಕು. ಶವ‌ ಇರುವ ಜಾಗದಲ್ಲೇ 10 ಜನರನ್ನು ಕರೆದುಕೊಂಡು ಬರಬಹುದು ಎಂದು ಹೇಳಿದ್ದಾರೆ.

ನವೀನ್​ ಪೋಷಕರಿಗೆ ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ. ಆದರೆ, ಶಾಸಕ ಬೆಲ್ಲದ್ ನೀಡಿರೋ ಬೇಜವಾಬ್ದಾರಿ ಹೇಳಿಕೆ ನವೀನ್​ ಪೋಷಕರನ್ನ ಮತ್ತಷ್ಟು ಕುಗ್ಗಿ ಹೋಗುವಂತೆ ಮಾಡಿದೆ.

Join Whatsapp
Exit mobile version