ತಾಯಿ-ಮಗು ಸಾವು: ವೈದ್ಯರ ವಿರುದ್ಧ ದೂರು

Prasthutha|

ಯಾದಗಿರಿ: ಹೊಟ್ಟೆಯಲ್ಲಿದ್ದ ಮಗು ಸಹಿತ ತಾಯಿಯೊಬ್ಬರು ಸಾವನ್ನಪ್ಪಿದ ಘಟನೆ ನಗರದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಗೂಡೂರು ಗ್ರಾಮದ ಸಂಗೀತಾ (20) ಮೃತ ಗರ್ಭಿಣಿಯಾಗಿದ್ದಾರೆ. ಹೆರಿಗೆ ಮಾಡಿಸುವಲ್ಲಿ  ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಸಾವು ಸಂಭವಿಸಿದೆ ಎಂದು ಮೃತ ಮಹಿಳೆ ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಮೇ.3ರಂದು ಸಂಗೀತಾ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತೀ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾ ಬಂದಿದ್ದು, ಆರೋಗ್ಯವಾಗಿದ್ದರು. ದಿನ ತುಂಬಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ, ನಾರ್ಮಲ್ ಹೆರಿಗೆ ಮಾಡುವುದಾಗಿ ವೈದ್ಯರು ಹೇಳಿದ್ದರು.

- Advertisement -

ಆದರೆ ಸಂಗೀತಾ ಆಸ್ಪತ್ರೆಗೆ ದಾಖಲಾಗಿದ್ದರು ವೈದ್ಯರು ಸ್ಕ್ಯಾನ್ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ.

ಇಡೀ ದಿನ ಆರೋಗ್ಯವಾಗಿ ಲವಲವಿಕೆಯಿಂದಿದ್ದ ಸಂಗೀತಾ ಅವರು  ಸಂಜೆ ಏಕಾಏಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆಸ್ಪತ್ರೆ ಮುಂದೆ ಆ್ಯಂಬುಲೆನ್ಸ್ ನಲ್ಲೇ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರ ಆಕ್ರೋಶಗೊಂಡು ಯಾದಗಿರಿ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.