Home ಟಾಪ್ ಸುದ್ದಿಗಳು ವಿಧಾನಸೌಧಕ್ಕೆ ಸಾಗಿಸುತ್ತಿದ್ದ ₹10 ಲಕ್ಷ ಜಪ್ತಿ| ಹಣದ ಮಾಹಿತಿ ಬಾಯ್ಬಿಡದ ಆರೋಪಿ

ವಿಧಾನಸೌಧಕ್ಕೆ ಸಾಗಿಸುತ್ತಿದ್ದ ₹10 ಲಕ್ಷ ಜಪ್ತಿ| ಹಣದ ಮಾಹಿತಿ ಬಾಯ್ಬಿಡದ ಆರೋಪಿ

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ್ ವಿಧಾನಸೌಧಕ್ಕೆ ಸಾಗಿಸುತ್ತಿದ್ದ ₹ 10 ಲಕ್ಷ ಜಪ್ತಿ ಮಾಡಲಾಗಿದ್ದು, ಹಣದ ಬಗ್ಗೆ ಆರೋಪಿ ಯಾವುದೇ ಮಾಹಿತಿ ನೀಡುತ್ತಿಲ್ಲ. ತನಿಖೆಗೂ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬುಧವಾರ ಸಂಜೆ 4.15ರ ಸುಮಾರಿಗೆ ವಿಧಾನಸೌಧ‌ದ ಒಳಗೆ ಹೋಗಲು ಪಶ್ಚಿಮ ಪ್ರವೇಶ ದ್ವಾರಕ್ಕೆ ಬ್ಯಾಗ್ ಸಮೇತ ಬಂದಿದ್ದ ಮಂಡ್ಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಅವರನ್ನು ತಡೆದಿದ್ದ ಭದ್ರತಾ ಸಿಬ್ಬಂದಿ, ಬ್ಯಾಗ್ ಪರಿಶೀಲಿಸಿದಾಗ ₹ 10 ಲಕ್ಷ ಹಣ ಪತ್ತೆಯಾಗಿತ್ತು.

ನಂತರ ಜಗದೀಶ್ ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದರು. ಜಪ್ತಿ ಮಾಡಿದ ಹಣ ಯಾರಿಗೆ ಸೇರಿದ್ದು? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂಬುದನ್ನು ತಿಳಿಯಲು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version