Home ಟಾಪ್ ಸುದ್ದಿಗಳು ಕಾಂಗ್ರೆಸ್’ನಲ್ಲಿ 10 ಮಂದಿಗೆ ಸಿಎಂ ಆಗುವ ಆಸೆ, ಅದ್ರಲ್ಲಿ ನಾನೂ ಒಬ್ಬ: ಪರಮೇಶ್ವರ್

ಕಾಂಗ್ರೆಸ್’ನಲ್ಲಿ 10 ಮಂದಿಗೆ ಸಿಎಂ ಆಗುವ ಆಸೆ, ಅದ್ರಲ್ಲಿ ನಾನೂ ಒಬ್ಬ: ಪರಮೇಶ್ವರ್

ತುಮಕೂರು: ಕಾಂಗ್ರೆಸ್’ನಲ್ಲಿ ಹತ್ತು ಮಂದಿ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.


ನಿಮಗೆ ಸಿಎಂ ಆಗುವ ಆಸೆ ಇದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ ಅವರು, ರಾಜಕೀಯಕ್ಕೆ ಬರುವುದು ಯಾಕೆ ಹೇಳಿ? ಅಧಿಕಾರ ಹಿಡಿಯೋಕೆ ತಾನೇ? ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 10 ಜನ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬ. ಅಲ್ಲದೇ ನಮ್ಮ ಪಕ್ಷ ದಲಿತ ಸಿಎಂ ಎಂದು ಜಾತಿ ಆಧಾರದ ಮೇಲೆ ಆಯ್ಕೆ ಮಾಡಲ್ಲ. ಆಯಾ ಸಂದರ್ಭಕ್ಕೆ ಯಾರು ಸಮರ್ಥರಿದ್ದಾರೋ, ಅಂಥವರನ್ನು ಹೈಕಮಾಂಡ್ ಸಿಎಂ ಮಾಡುತ್ತೆ ಎಂದು ಹೇಳಿದರು.

Join Whatsapp
Exit mobile version