Home ಟಾಪ್ ಸುದ್ದಿಗಳು ಬಸ್ ನಲ್ಲಿ 1.27 ಲಕ್ಷ ರೂ. ಮೌಲ್ಯದ ಮದ್ಯ ವಶ: ಇಬ್ಬರು ಅರೆಸ್ಟ್

ಬಸ್ ನಲ್ಲಿ 1.27 ಲಕ್ಷ ರೂ. ಮೌಲ್ಯದ ಮದ್ಯ ವಶ: ಇಬ್ಬರು ಅರೆಸ್ಟ್

ಕಾರವಾರ: KSRTC  ಬಸ್‍ ನಲ್ಲಿ 1.27 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ನಾಗರಾಜ ಹಾಗೂ ಸಾಗರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ನಾಗರಾಜ ಹಾಗೂ ಸಾಗರ್ ಗೋವಾದಿಂದ ಶಿವಮೊಗ್ಗಕ್ಕೆ ಬ್ಯಾಗ್‍ ನಲ್ಲಿ ವಿವಿಧ ಬ್ರಾಂಡ್‍ ನ ಮದ್ಯವನ್ನು ತುಂಬಿಕೊಂಡು ಬಸ್‍ ನಲ್ಲಿ ತೆರಳುತಿದ್ದರು. ಈ ವೇಳೆ ತಪಾಸಣೆ ನಡೆಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Join Whatsapp
Exit mobile version