Home ಟಾಪ್ ಸುದ್ದಿಗಳು 40ರ ಬದಲಿಗೆ 04 ಅಂಕ| ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿನಿ ಅನುತ್ತೀರ್ಣ!

40ರ ಬದಲಿಗೆ 04 ಅಂಕ| ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿನಿ ಅನುತ್ತೀರ್ಣ!

ಗಂಗಾವತಿ: ಕೋವಿಡ್‌ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ವರ್ಷ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಿಯು ಬೋರ್ಡ್ ಪಾಸ್ ಮಾಡಿದೆ. ಅದಾಗ್ಯೂ ಸರ್ಕಾರದ ರಿಯಾಯಿತಿಯನ್ನು ತಿರಸ್ಕರಿಸಿ ಗಂಗಾವತಿಯ ವೆಂಕಟೇಶ್ವರ ಪಿಯು ಕಾಲೇಜಿನ ಭೂಮಿಕಾ ಎನ್ನುವ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಪಿಯು ಬೋರ್ಡ್ ನ ಎಡವಟ್ಟಿನಿಂದಾಗಿ ರಸಾಯನಶಾಸ್ತ್ರದಲ್ಲಿ ಭೂಮಿಕಾ ಪಡೆದದ್ದು 40 ಅಂಕಗಳು ಆದರೆ ಅಧಿಕಾರಿಗಳ ಎಡವಟ್ಟಿನಿಂದ 4ಅಂಕ ಪಡೆದಿದ್ದಾಳೆ ಎಂದು ವಿದ್ಯಾರ್ಥಿನಿಯನ್ನು ಅನುತ್ತೀರ್ಣ ಮಾಡಲಾಗಿದೆ.

ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನೀಡದ ಕಾರಣ ಭೂಮಿಕಾ ಪರೀಕ್ಷೆ ಬರೆದು ಪಡೆದ ಅಂಕಗಳಲ್ಲಿ ಭೌತಶಾಸ್ತ್ರದಲ್ಲಿ 28ಅಂಕ ರಾಸಾಯನಶಾಸ್ತ್ರದಲ್ಲಿ 40 ಅಂಕಗಳು ಬಂದಿದ್ದರೂ ಭೂಮಿಕಾ ಅನುತ್ತೀರ್ಣರಾಗಿದ್ದು ಪಿಯು ಬೋರ್ಡ್ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಭೂಮಿಕಾ ತಂದೆ ಚಂದ್ರಶೇಖರಗೌಡ ತಾವರಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ .

Join Whatsapp
Exit mobile version