ಹೈದರಾಬಾದ್‌ ನ ನಿಝಾಮ್ ಕಟ್ಟಿಸಿದ್ದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

Prasthutha|

- Advertisement -

ಹೈದರಾಬಾದ್: ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಝಾಮ್ ಮಹಬೂಬ್ ಅಲಿ ಖಾನ್ ಕಟ್ಟಿಸಿದ್ದರು.

ಈ ಹಳೆಯ ಕಟ್ಟಡದ ಒಳಗೆ ಕುಳಿತಿದ್ದ ಸಿಬ್ಬಂದಿ ಕುಸಿತದ ದೊಡ್ಡ ಸದ್ದು ಕೇಳಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಓಡಿಹೋಗಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರೂ ಗಾಯಗಳಾಗಿಲ್ಲ.

- Advertisement -

ಈ ಕಟ್ಟಡವನ್ನು ಹೈದರಾಬಾದ್ ಸಿಟಿ ಟೌನ್ ಹಾಲ್ ಆಗಿ ಬಳಸಲಾಗುತ್ತಿತ್ತು, ಹಿಂದೆ ಇಲ್ಲಿ ನಿಝಾಮ್ ಜನರನ್ನು ಭೇಟಿಯಾಗುತ್ತಿದ್ದರು.

ಸ್ವಾತಂತ್ರ್ಯದ ನಂತರ, ಈ ಕಟ್ಟಡವನ್ನು ಅಸೆಂಬ್ಲಿ ಹಾಲ್ ಆಗಿ ಬಳಸಲು ಆರಂಭಿಸಲಾಯಿತು. ನಂತರ ಅಸೆಂಬ್ಲಿ ನಡೆಸಲು ಹೊಸ ಕಟ್ಟಡ ನಿರ್ಮಿಸಿದರೂ, ಕಚೇರಿ ಸಿಬ್ಬಂದಿ ಹಳೆಯ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದರು.

Join Whatsapp