Home ಟಾಪ್ ಸುದ್ದಿಗಳು ಹಥ್ರಾಸ್ ಪ್ರಕರಣ |‌ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಹಥ್ರಾಸ್ ಪ್ರಕರಣ |‌ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಹಥ್ರಾಸ್: ಹಥ್ರಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ನಿಖಿಲ್ ಶರ್ಮಾ ಮತ್ತು ರೋಹಿತಾಶ್ ಶರ್ಮಾ ಬಂಧಿತ ಆರೋಪಿಗಳಾಗಿದ್ದಾರೆ.

 ಆರೋಪಿಗಳನ್ನು ಬಂಧಿಸಲು ಸಹಾಯ ಮಾಡಿದವರಿಗೆ ತಲಾ 25 ಸಾವಿರ ನೀಡಲಾಗುವುದು ಎಂದು ಆಗ್ರಾ ಎಡಿಜಿ ಜಾನ್ ರಾಜೀವ್ ಕೃಷ್ಣ ಘೋಷಿಸಿದ್ದರು.

ಲಲಿತ್ ಶರ್ಮಾ ಎಂಬವರು ಈ ಆರೋಪಿಗಳ ಸುಳಿವು ನೀಡಿದ್ದು, ಅವರಿಗೆ 25-25 ಸಾವಿರ ರೂಪಾಯಿಗಳಂತೆ, 50 ಸಾವಿರ ರೂಪಾಯಿಗಳ  ಬಹುಮಾನವನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ.

 ಪ್ರಮುಖ ಆರೋಪಿ ಗೌರವ್ ಶರ್ಮಾನನ್ನು ಪೊಲೀಸರು ಹತ್ಯೆ ಮಾಡಿಲ್ಲ. ಆತನ ಬಂಧನಕ್ಕೆ ಪೊಲೀಸ್ ತಂಡಗಳು ಮುಂದಾಗಿದ್ದು, ಈತನ ಸುಳಿವು ನೀಡಿದವರಿಗೆ ಪೊಲೀಸರು 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Join Whatsapp
Exit mobile version