ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶೇಷ ನ್ಯಾಯಾಲಯದಲ್ಲಿ ದಾಖಲಾದ ಚಾರ್ಜ್‌ಶೀಟ್‌ನಲ್ಲಿ, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿನ ವಿಳಂಬವು ನಿರ್ಣಾಯಕ ಸಾಕ್ಷ್ಯಗಳನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಂತ್ರಸ್ತೆಯ ಕುಟುಂಬಸ್ಥರ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸರಿಯಾದ ವಿಧಾನವನ್ನು ಅನುಸರಿಸಲಿಲ್ಲ ಎಂದು ಸಿಬಿಐ ತಿಳಿಸಿದೆ.
ರೆಕಾರ್ಡಿಂಗ್ ಒಂದರಲ್ಲಿ ಸಂತ್ರಸ್ತೆ ‘ಜಬರ್ದಸ್ತಿ’(ಆರೋಪಿ ತನ್ನ ಮೇಲೆ ಬಲವಂತಪಡಿಸುತ್ತಿರುವಾಗ) ಎಂದು ಹೇಳಿಕೆ ನೀಡಿದ್ದರೂ ಸಹ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿಲ್ಲ ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ತಿಳಿಸಿದೆ.
ಪೊಲೀಸರು ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354(ಅತ್ಯಾಚಾರದ ಉದ್ದೇಶದಿಂದ ಬಲವಂತ ಪಡಿಸುವುದು) ಅಥವಾ ಸೆಕ್ಷನ್ 376 (ಅತ್ಯಾಚಾರ) ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿರಲಿಲ್ಲ ಎಂದು ಸತಿಳಿಸಿದೆ.
ಸೆಪ್ಟೆಂಬರ್ 22 ರಂದು ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ, ಸಂತ್ರಸ್ತೆಯು ‘ಬಲಾತ್ಕಾರ್’ ಎಂಬ ಪದವನ್ನು ಬಳಸಿದ ನಂತರ ಮತ್ತು ನಾಲ್ವರು ಆರೋಪಿಗಳ ಬಗ್ಗೆ ಹೇಳಿಕೆ ನೀಡಿದ ನಂತರವೇ ಆಕೆಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ಈ ಕಾರಣದಿಂದಾಗಿ ಸಮಯಕ್ಕೆ ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿದೆ.