Home ಗಲ್ಫ್ ಸೌದಿ ಅರೇಬಿಯಾ: ನ. 26ರಿಂದ ಎ‌.ಟಿ.ಎಸ್ ಕಪ್-2020 ಕ್ರಿಕೆಟ್ ಪಂದ್ಯಾವಳಿ

ಸೌದಿ ಅರೇಬಿಯಾ: ನ. 26ರಿಂದ ಎ‌.ಟಿ.ಎಸ್ ಕಪ್-2020 ಕ್ರಿಕೆಟ್ ಪಂದ್ಯಾವಳಿ

►► ಪ್ರಥಮ ಬಹುಮಾನ 5,555 ಸೌದಿ ರಿಯಾಲ್

►► ದ್ವಿತೀಯ ಬಹುಮಾನ 3,333 ಸೌದಿ ರಿಯಾಲ್

ಜಿದ್ದಾ: ಮಂಗಳೂರಿನ ಆಟಗಾರರನ್ನೊಳಗೊಂಡ ಸೌದಿ ಅರೇಬಿಯಾದ ಎ.ಟಿ.ಎಸ್. ಜಿದ್ದಾ ತಂಡವು ಇದೇ ತಿಂಗಳ ನವೆಂಬರ್ 26, 27 ಹಾಗೂ 28 ರಂದು ಹೊನಲು ಬೆಳಕಿನ

ಎ.ಟಿ.ಎಸ್ ಕಪ್-2020 ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು, ಮರ್ಸಲ್ ನ ಬಿ.ಎಮ್.ಟಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.

ಇದರ ಅಂಗಾವಾಗಿ ಇತ್ತೀಚೆಗೆ ಜಿದ್ದಾ ಸಮೀಪದ ಅರೇಬಿಯನ್ ಸ್ಟ್ರೀಟ್ ನ ದಿ ವಿಲೇಜ್ ರೆಸ್ಟೋರೆಂಟ್ ನಲ್ಲಿ “ಎ.ಟಿ.ಎಸ್ ಟ್ರೋಫಿ ಬಿಡುಗಡೆ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾ ಕ್ರಿಕೆಟ್ ಫೆಡರೇಶನ್ ನ ಸಾದಿಕ್ ಯು ಇಸ್ಲಾಂ ಹಾಗೂ ಖಾಸಿಮ್ ನಕ್ವಿ , ಎ.ಎಲ್.ಎಸ್ ನ ಶಿಯಾಮ್ ಶೇಖ್, ಎಮ್.ಎಮ್.ಎ ನ ಡಾ.ಅಬ್ದುಲ್ ಶಕೀಲ್, ಅಲ್ ಅಮ್ರಿಯಾದ ಝೈನುದ್ದೀನ್ ಮುನ್ನೂರ್ ಇನ್ನಿತರ ಗಣ್ಯರು ಹಾಗೂ ಎ.ಟಿ‌‌.ಎಸ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಎ‌.ಟಿ‌.ಎಸ್ ಕಪ್ ಗಾಗಿ 12 ತಂಡಗಳು ಸೆಣಸಾಡಲಿದ್ದು, ರಿಯಾದ್, ದಮಾಮ್, ಸೌದಿ ಅರೇಬಿಯಾದ ಆಟಗಾರರು ಭಾಗವಹಿಸಲಿದ್ದಾರೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೂರು ತಂಡಗಳ 4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ

ಪ್ಯಾರಾಮೌಂಟ್ ರಿಯಾದ್, ಎಂಎಂ ಅಡ್ವರ್ಟೈಸಿಂಗ್ ಆಂಡ್ ಇಂಟೀರಿಯರ್ಸ್, ಆರೊ ಸೋಫ಼್ಟ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಪಂದ್ಯಾಕೂಟದ ವಿಜೇತ ತಂಡ 5,555 ರಿಯಲ್ ಹಾಗೂ ರನ್ನರ್ ಅಪ್ ತಂಡ 3,333 ರಿಯಲ್ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು, ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾಗುತ್ತದೆ ಎಂದು ಆಯೋಜಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version