Home ವಿದೇಶ ಸೌದಿ ಅರೇಬಿಯಾದ ಇಬ್ಬರು ಮಹಿಳಾ ಹಕ್ಕುಗಳ ಹೋರಾಟಗಾರರು ಜೈಲಿನಿಂದ ಬಿಡುಗಡೆ

ಸೌದಿ ಅರೇಬಿಯಾದ ಇಬ್ಬರು ಮಹಿಳಾ ಹಕ್ಕುಗಳ ಹೋರಾಟಗಾರರು ಜೈಲಿನಿಂದ ಬಿಡುಗಡೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಬಂಧಿತರಾಗಿದ್ದ ಮಾನವ ಹಕ್ಕುಗಳ ಹೋರಾಟಗಾರರಾದ ಸಮರ್ ಬದಾವಿ, ನಸೀಮಾ ಅಲ್ ಸದಾಹ್ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮಹಿಳಾ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.


ಸಮರ್ ಬದಾವಿ, ನಸೀಮಾ ಅಲ್ ಸದಾಹ್ ಅವರ ಜೈಲು ಶಿಕ್ಷೆಯ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಅವರು ಬಿಡುಗಡೆಯಾಗಿದ್ದಾರೆ. ಆಡಳಿತ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಭಾಗವಾಗಿ ಸೌದಿ ಆಡಳಿತವು 2018ರಲ್ಲಿ ಇವರನ್ನು ಬಂಧಿಸಿತ್ತು. ಸೌದಿಯಲ್ಲಿ ಮಹಿಳೆಯರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಪುರುಷ ಸಂಬಂಧಿಯ ಒಪ್ಪಿಗೆಯನ್ನು ಪಡೆಯಬೇಕೆಂಬ ಕಾನೂನನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಚಳುವಳಿಯಲ್ಲಿ ಇವರು ಗುರುತಿಸಿಕೊಂಡಿದ್ದರು.


ಸಮರ್ ಬದಾವಿಯ ಅವರು ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕಾಗಿ ರಾಷ್ಟ್ರೀಯ ಮಹಿಳಾ ಧೈರ್ಯ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಮಹಿಳೆಯರಿಗೆ ವಾಹನ ಚಲಾಯಿಸಲು, ಮತದಾನ ಮಾಡಲು, ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ನಡೆದ ಅಭಿಯಾನಕ್ಕೆ ಬದಾವಿ ಅವರೂ ಕೂಡ ಸಹಿಹಾಕಿದ್ದರು.
ಇವರು ವಿದೇಶಿ ಸಂಘಟನೆಗಳ ಜೊತೆ ನಂಟನ್ನು ಹೊಂದಿದ್ದಾರೆ ಎಂದು ಆರೋಪಿಸಿ ಸೌದಿ ಆಡಳಿತವು ಅವರನ್ನು ಜೈಲಿಗೆ ಹಾಕಿತ್ತು.

Join Whatsapp
Exit mobile version