ಸಿಮಿ ಪ್ರಕರಣ | 122 ಅಮಾಯಕರ 20 ವರ್ಷಗಳ ನಷ್ಟವು ನನ್ನ ಹೃದಯವನ್ನು ಘಾಸಿಗೊಳಿಸಿದೆ : ಜಿಗ್ನೇಶ್ ಮೇವಾನಿ

Prasthutha|

“ಸಿಮಿ(ಸ್ಟುಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ)ಯೊಂದಿಗೆ ಸಂಪರ್ಕದಲ್ಲಿದ್ದಾರೆಂದು ಆರೋಪಿಸಿ 122 ಅಮಾಯಕ ಜನರನ್ನು 20 ವರ್ಷಗಳ ಕಾಲ ಜೈಲಿನಲ್ಲಿರಿಸಿರುವುದು ನನ್ನ ಹೃದಯವನ್ನು ಘಾಸಿಗೊಳಿಸಿದೆ” ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

- Advertisement -

“ಅವರು ಕಳೆದುಕೊಂಡ ಆ 20 ವರ್ಷಗಳು ನನ್ನ ಹೃದಯವನ್ನು ಘಾಸಿಗೊಳಿಸಿದೆ. ಎಂದಿಗೂ ಹಿಂತಿರುಗಿ ಬರಲಾರದ ಆ 20 ವರ್ಷಗಳು … ನಮ್ಮ ವಿಫಲ ಕಾನೂನು ವ್ಯವಸ್ಥೆಗೆ ಧನ್ಯವಾದಗಳು!” ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.

ಸಿಮಿಯೊಂದಿಗೆ ಸಂಪರ್ಕದಲ್ಲಿದ್ದಾರೆಂದು ಆರೋಪಿಸಿ 2001 ರಲ್ಲಿ ಗುಜರಾತ್ ಪೊಲೀಸರು 127 ಜನರನ್ನು ಬಂಧಿಸಿದ್ದರು. 20 ವರ್ಷಗಳ ಕಾನೂನು ಹೋರಾಟದ ನಂತರ ಸೂರತ್ ಮುಖ್ಯ ಮ್ಯಾಜಿಸ್ಟ್ರೇಟ್ ಎಎನ್ ಧವಾ ಎಲ್ಲರನ್ನೂ ಖುಲಾಸೆಗೊಳಿಸಿದ್ದಾರೆ.

- Advertisement -

ಆರೋಪವನ್ನು ಸಾಬೀತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಮತ್ತು ಆರೋಪಿಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯುಎಪಿಎ ವಿಧಿಸಲು ಕೇಂದ್ರದಿಂದ ಅನುಮೋದನೆ ಪಡೆಯುವ ಪ್ರಾಥಮಿಕ ಪ್ರಕ್ರಿಯೆಯನ್ನು ಕೂಡ ಪೊಲೀಸರು ಪೂರ್ಣಗೊಳಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

 
 
Join Whatsapp