Home ಟಾಪ್ ಸುದ್ದಿಗಳು ಸರ್ಕಾರದ ನಿಧಾನಗತಿಯ ಲಸಿಕಾ ಪ್ರಕ್ರಿಯೆಯ ವಿರುದ್ಧ ಐವನ್ ಡಿಸೋಜ ಆಕ್ರೋಶ

ಸರ್ಕಾರದ ನಿಧಾನಗತಿಯ ಲಸಿಕಾ ಪ್ರಕ್ರಿಯೆಯ ವಿರುದ್ಧ ಐವನ್ ಡಿಸೋಜ ಆಕ್ರೋಶ

ಮಂಗಳೂರು : ಸರ್ಕಾರದ ನಿಧಾನಗತಿಯ ಲಸಿಕಾ ಪ್ರಕ್ರಿಯೆಯನ್ನು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಟೀಕಿಸಿದ್ದು,  ಕೊರೊನಾ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸರ್ಕಾರ ಉಚಿತವಾಗಿ ಲಸಿಕೆ ನೀಡಲು ಮೀನಾ ಮೇಷ ಎಣಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಲಸಿಕೆಯನ್ನು ಪಡೆಯದ ಕಾರಣ ನಮ್ಮವರು ಸತ್ತಿದ್ದಾರೆ ಎಂದು ಹೇಳುವ ಮಂದಿ ಹೆಚ್ಚಾಗುತ್ತಿದ್ದಾರೆ. ಲಸಿಕೆ ಪಡೆದವರು ಯಾರೂ ಸಾಯುವುದಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಹಾಗಾದರೆ ಇವತ್ತು ಲಸಿಕೆ ಸಿಗದೇ ಸಾವನ್ನಪ್ಪಿದ್ದವರಿಗೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.

ಹೀಗಾಗಿ ಸಾವು- ನೋವುಗಳಿಗೆ ಬಿಜೆಪಿ ಸರ್ಕಾರವೇ ಹೊಣೆ ಎಂದು ಐವನ್ ಆರೋಪಿಸಿದರು. ಸರ್ಕಾರಕ್ಕೆ ನೈತಿಕತೆ ಇಲ್ಲ. ಬಿಜೆಪಿ ಅಧ್ಯಕ್ಷರೊಬ್ಬರು ಬಿಜೆಪಿಗೆ ಕಾಂಗ್ರೆಸ್ ನ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಇದು ಈ ಶತಮಾನದ ಜೋಕ್ ಎಂದು ವ್ಯಂಗ್ಯವಾಡಿದ ಅವರು, ಅದು ಓಕೆ. ಜನರೇ ನಿಮಗೆ ವೀಸಾ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆಡಳಿತ ಮಾಡಲು ಗೊತ್ತಿಲ್ಲ. ಕಾಂಗ್ರೆಸ್ ಸಂಘಟಿತವಾಗಿ ಕೆಲಸ ಮಾಡಿದ್ರೆ ಜೈಲಿಗೆ ಕಳುಹಿಸಲು ಮುಂದೆ ಬರ್ತಾರೆ ಎಂದು ಕಿಡಿಕಾರಿದರು. ಪ್ಯಾಕೇಜ್ ಘೋಷಣೆ ಮಾಡಿ ಬಿಪಿಎಲ್, ಎಪಿಎಲ್ ಕಾರ್ಡ್ ಎಂದು ಯಾಕೆ ವಿಂಗಡಣೆ ಮಾಡಬೇಕೆಂದು ಪ್ರಶ್ನಿಸಿದ ಅವರು ಒಟ್ಟಾರೆಯಾಗಿ ಈ ಸರ್ಕಾರ ಜನಪರವಾಗಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕೋವಿಡ್ ಮೂರನೇ ಅಲೆಯನ್ನು ತಡೆಯಲು ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ವತಿಯಿಂದ ಮೂರು ಸಾವಿರ ಕೋವಿಡ್ ಪ್ರಿವೆಂಶನ್ ಕಿಟ್ ಹಾಗೂ ಕೋವಿಡ್ ಬ್ರೇಕ್ ದಿ ಚೈನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘೋಷಿಸಿದರು.

ನಾಳೆಯಿಂದ ಬೆಳಗ್ಗೆ ಈ ಕೋವಿಡ್ ಪ್ರಿವೆಂಶನ್ ಕಿಟನ್ನು ನೀಡಲಾಗುವುದು. ಈ ಮೂಲಕ ಮೂರನೇ ಅಲೆಯನ್ನು ತಡೆಗಟ್ಟಲು ನಾವು ಈಗಲೇ ಕೆಲಸ ಮಾಡುತ್ತೇವೆ ಎಂದರು.

Join Whatsapp
Exit mobile version