ಸಂಸದರನ್ನು ನೆಲಕ್ಕೆ ತಳ್ಳಿದ ಪೊಲೀಸರು

Prasthutha|

ಹಥ್ರಾಸ್: ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಹಥ್ರಾಸ್ ನ ಯುವತಿಯ ಗ್ರಾಮವನ್ನು ಪ್ರವೇಶಿಸಲು ಯತ್ನಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೇಕ್ ಒಬ್ರಿಯಾನ್ ರನ್ನು ಪೊಲೀಸರು ನೆಲಕ್ಕೆ ತಳ್ಳಿಹಾಕಿದ ಘಟನೆ ನಡೆದಿದೆ.  ಪಕ್ಷದ ಇತರ ಮೂವರು ನಾಯಕರೊಂದಿಗೆ ಗ್ರಾಮವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ತಡೆದಾಗ ತಳ್ಳಾಟ ನಡೆದಿದ್ದು, ಸಂಸದರನ್ನು ನೆಲಕ್ಕೆ ಉರುಳಿಸಲಾಗಿದೆ.

- Advertisement -

32 ನಿಮಿಷಗಳ ವೀಡಿಯೊದಲ್ಲಿ ಬಿಳಿ ಅಂಗಿ ಮತ್ತು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೋರ್ವ ಟಿ.ಎಂ.ಸಿ ಮಹಿಳಾ ಸಂಸದೆ ಪ್ರತಿಮಾ ಮಂಡಲ್  ಗ್ರಾಮದತ್ತ ತೆರಳುತ್ತಿರುವಾಗ ಅವರ ಭುಜವನ್ನು ಹಿಡಿದು ತಡೆಯುತ್ತಿರುವುದು ಕಾಣುತ್ತದೆ. ಆ ವೇಳೆ ಡೆರೇಕ್ ಒಬ್ರಿಯಾನ್ ಆಕೆಯನ್ನು ರಕ್ಷಿಸುವುದಕ್ಕೆ ಮುಂದಾಗಿದ್ದು, ವ್ಯಕ್ಲಿ ಅವರನ್ನು ನೆಲಕ್ಕೆ ತಳ್ಳಿಹಾಕುತ್ತಾರೆ.

ಈ ಮೊದಲು ಸಂಸದರಾದ ಪ್ರತಿಮಾ ಮಂಡಲ ಮತ್ತು ಕಕೊಲಿ ಘೋಷ್ ದಸ್ತಿದಾರ್ ಮತ್ತು ಮಾಜಿ ಸಂಸದ ಮಮತಾ ಠಾಕೂರು ಎರಡೂ ಕೈಗಳನ್ನು ಜೋಡಿಸಿ ಹಥ್ರಾದ ಒಳಪ್ರವೇಶಿಸಲು ಅನುಮತಿಸುವಂತೆ ಪೊಲೀಸರನ್ನು ಬೇಡುತ್ತಿರುವುದು ಕಾಣುತ್ತದೆ.

- Advertisement -

ಕನಿಷ್ಠ ಪಕ್ಷ ಮಹಿಳೆಯರನ್ನು ಒಳಹೋಗಲು ಅನುಮತಿಸುವಂತೆ ಒಬ್ರಿಯಾನ್ ಪೊಲೀಸರನ್ನು ಕೋರುತ್ತಾರೆ. ಆದರೆ ಪೊಲೀಸರು ಅವರ ದಾರಿಯನ್ನು ತಡೆದಿದ್ದರು.ಅಲ್ಲದೆ ಪೊಲೀಸರು ಮಹಿಳಾ ನಾಯಕಿಯರನ್ನು ಹಿಡಿದು ಜಗ್ಗಾಡುವುದು ಕೂಡ ವೀಡಿಯೊದಲ್ಲಿ ಕಾಣುತ್ತದೆ.

“ತೃಣಮೂಲ ಕಾಂಗ್ರೆಸ್ ನ ಸಂಸದರ ನಿಯೋಗವೊಂದು ದಿಲ್ಲಿಯಿಂದ 200 ಕಿ.ಮೀ ದೂರ ಪ್ರಯಾಣಿಸಿದ್ದು ಯುಪಿ ಪೊಲೀಸರು ಅವರನ್ನು ತಡೆದಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ. ಸಂಕಟದಲ್ಲಿರುವ ಕುಟುಂಬದ ಜೊತೆ ಐಕಮತ್ಯ ತೋರಿಸುವುದಕ್ಕಾಗಿ ಅವರು ಅಲ್ಲಿಗೆ ಹೋಗಿದ್ದರು”  ಎಂದು ಪಕ್ಷದ ಹೇಳಿಕೆ ತಿಳಿಸಿದೆ.

Join Whatsapp