ವಿಮಾನವನ್ನೇ ತಳ್ಳಿ ಬದಿಗೆ ಸರಿಸಿದ ಪ್ರಯಾಣಿಕರು !

Prasthutha|

ಕಠ್ಮಂಡು: ಪ್ರಯಾಣಿಕರು ರನ್ವೇ ಯಿಂದ ವಿಮಾನವನ್ನೇ ತಳ್ಳಿ ಬದಿಗೆ ಸರಿಸಿದ ಘಟನೆ ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ದೃಶ್ಯ ವೈರಲ್ ಆಗಿದೆ.

- Advertisement -

ತಾರಾ ಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಟೈರ್ ಸ್ಫೋಟಗೊಂಡ ಪರಿಣಾಮ ನೇಪಾಳದ ಬಾಜುರಾ ವಿಮಾನ ನಿಲ್ದಾಣದ ರನ್ ವೇಯಲ್ಲಿ ಬಾಕಿಯಾಗಿತ್ತು. ಇದರಿಂದ ನಿಲ್ದಾಣದಲ್ಲಿ ವಿಮಾನ ಇಳಿಯಲು ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಲಘು ವಿಮಾನವನ್ನು ಪ್ರಯಾಣಿಕರು ತಳ್ಳಿ ಮುಂದಕ್ಕೆ ಸಾಗಿಸಿದ್ದಾರೆ. ಈ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

Join Whatsapp