Home ಟಾಪ್ ಸುದ್ದಿಗಳು ವಿದ್ಯುತ್ ತಗುಲಿದ ಅಣ್ಣನ ರಕ್ಷಣೆಗೆ ಧಾವಿಸಿದ ತಮ್ಮ: ಸಹೋದರರಿಬ್ಬರೂ ಸಾವು

ವಿದ್ಯುತ್ ತಗುಲಿದ ಅಣ್ಣನ ರಕ್ಷಣೆಗೆ ಧಾವಿಸಿದ ತಮ್ಮ: ಸಹೋದರರಿಬ್ಬರೂ ಸಾವು

ವಿಜಯಪುರ: ತೋಟದ ಬಾವಿ ಬಳಿ ವಿದ್ಯುತ್ ತಗುಲಿ ಸಂಭವಿಸಿದ ದುರಂತವೊಂದರಲ್ಲಿ ಅಣ್ಣ-ತಮ್ಮ ಇಬ್ಬರೂ ಸಾವಿಗೀಡಾದ ದಾರುಣ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಸಂಭವಿಸಿದೆ. ಇಂಡಿ ತಾಲೂಕಿನ ಭತಗುಣಕಿಯ ಮುದ್ದುಗೌಡ ಅಪ್ಪಾಸಾಹೇಬ್ ಪಾಟೀಲ್ (20) ಹಾಗೂ ಶಿವರಾಜ್ ಅಪ್ಪಾಸಾಹೇಬ್ ಪಾಟೀಲ್ (18) ಮೃತಪಟ್ಟ ಸಹೋದರರು.


ಗ್ರಾಮದ ತೋಟದ ಬಾವಿಯ ಬಳಿಗೆ ಹೋಗಿದ್ದ ಸಹೋದರರ ಪೈಕಿ ಮುದ್ದುಗೌಡ ಮೋಟಾರ್ ಆನ್ ಮಾಡಿದಾಗ ವಿದ್ಯುತ್ ಶಾಕ್ ತಗುಲಿದೆ. ತಕ್ಷಣ ಅಣ್ಣ ಜೀವ ರಕ್ಷಣೆಗೆ ಧಾವಿಸಿದ ತಮ್ಮ ಶಿವರಾಜ್​, ಅಣ್ಣನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ದುರದೃಷ್ಟವಶಾತ್ ಇಬ್ಬರಿಗೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದ್ದಾರೆ.
ಝಳಕಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣದ ದಾಖಲಿಸಿ ಮುಂದಿನ ತನಿಖೆಯನ್ನು ‌ಕೈಗೊಂಡಿದ್ದಾರೆ.

Join Whatsapp
Exit mobile version