Home ಟಾಪ್ ಸುದ್ದಿಗಳು ವಿದೇಶಿ ಕರೆನ್ಸಿ ಕಳ್ಳಸಾಗಣೆ | ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ಗಂಭೀರ ಆರೋಪ

ವಿದೇಶಿ ಕರೆನ್ಸಿ ಕಳ್ಳಸಾಗಣೆ | ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ಗಂಭೀರ ಆರೋಪ

ಎರ್ನಾಕುಲಂ: ವಿದೇಶಿ ಕರೆನ್ಸಿ ಕಳ್ಳಸಾಗಣಿಕೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿಲುಕಿದ್ದು,  ತಾನು ಪಿಣರಾಯಿ ವಿಜಯನ್  ಸೂಚನೆಯ ಮೇರೆಗೆ  ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಿರುವುದಾಗಿ ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್ ಹೇಳಿಕೆ ನೀಡಿರುವುದು ಕೇರಳ ಮುಖ್ಯಮಂತ್ರಿ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಪಿಣರಾಯಿ ವಿಜಯನ್ ಸೇರಿದಂತೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಸಿಲುಕಿದ್ದಾರೆ.  ಯುಎಇಯ ಹಿಂದಿನ ಕಾನ್ಸುಲ್ ಜನರಲ್ ಅವರೊಂದಿಗೆ ಮುಖ್ಯಮಂತ್ರಿಗಳ ನಿಕಟ ಸಂಪರ್ಕ ಮತ್ತು ಅಕ್ರಮ ವಿತ್ತೀಯ ವಹಿವಾಟುಗಳ ಬಗ್ಗೆ ಸ್ವಪ್ನಾ ಸುರೇಶ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಕೇರಳ ವಿಧಾನಸಭೆ ಸ್ಪೀಕರ್ ಮತ್ತು ಕ್ಯಾಬಿನೆಟ್ ನ ಮೂವರು ಸದಸ್ಯರ ವಿರುದ್ಧ ಸುರೇಶ್ ಅಕ್ರಮ ವಿತ್ತೀಯ ವಹಿವಾಟು ನಡೆಸಿದ್ದಾರೆ. ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚೆಯೇ ಈ ಆರೋಪ ಕೇಳಿ ಬಂದಿದ್ದು  ಕೇರಳ ರಾಜಕೀಯದಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.


Join Whatsapp
Exit mobile version