ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಧ್ವನಿ ಸಂದೇಶ| ಏನಿದು ಹೊಸ ಫೀಚರ್?

Prasthutha|

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗೀಗ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿದೆ. 2022 ರಲ್ಲಿ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹಲವಾರು ಹೊಸ ಫೀಚರ್ಸ್ ಪರಿಚಯಿಸಿದೆ.

- Advertisement -

 ವಾಟ್ಸ್ಆ್ಯಪ್ ಈಗ ಮತ್ತೊಂದು ಫೀಚರ್ ಹೊರತರಲು ಸಿದ್ಧತೆ ನಡೆಸಿದೆ. ಇನ್ನು ಮುಂದೆ, ನಿಮ್ಮ ವಾಯ್ಸ್ ನೋಟ್(ಧ್ವನಿ ಸಂದೇಶ)ಗಳನ್ನೂ ಸ್ಟೇಟಸ್ ಗೆ ಅಪ್ಲೋಡ್ ಮಾಡಲು ಸಾಧ್ಯವಾಗುವಂಥ ಫೀಚರ್ ಒಂದನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ.

ಇದುವರೆಗೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಮಾತ್ರ ಶೇರ್ ಮಾಡಲು ಅವಕಾಶವಿತ್ತು. ಇನ್ನು ಮುಂದೆ 30 ಸೆಕೆಂಡುಗಳ ಅವಧಿಯ ಧ್ವನಿ ಸಂದೇಶಗಳನ್ನು ನೀವು ಸ್ಟೇಟಸ್ ಗೆ ಹಾಕಬಹುದು. ಸಂದೇಶ ಬರೆಯುವಂಥ ಸ್ಥಳದಲ್ಲಿರುವ ಮೈಕ್ರೋಫೋನ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಧ್ವನಿ ಸಂದೇಶವನ್ನು ಸ್ಟೇಟಸ್ ಗೆ ಅಪ್ಲೋಡ್ ಮಾಡಬಹುದು ಎಂದು ಹೇಳಲಾಗಿದೆ.

Join Whatsapp