ಲಿಂಗಾಯತ, ಹಿಂದುಳಿದ ವರ್ಗಗಳ ಸ್ವಾಮೀಜಿಗಳಿಂದ ಡಿ.ಕೆ.ಶಿವಕುಮಾರ್ ಭೇಟಿ: ರಾಜಕೀಯ ಚರ್ಚೆಗೆ ಗ್ರಾಸ

Prasthutha|

ಗದಗ ಜಿಲ್ಲೆಯ ಬಾಲೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

- Advertisement -


ಹಡಪದ ಗುರುಪೀಠ, ರೆಡ್ಡಿ ಗುರುಪೀಠ, ಬಳ್ಳಾರಿ ಕಲ್ಯಾಣಮಠ, ಭೋವಿ ಗುರುಪೀಠ, ಈಡಿಗ ಗುರುಪೀಠ, ಕಡಕೋಳ ಮಠ, ಅಕ್ಕಲಕೂಟ, ಗಡಿಗೌಡಗಾಂವ, ಉಗುರಗೋಳ, ಬೊಮ್ಮನಹಳ್ಳಿ ಮಠ, ಗೋಟೂರ ಮಠ, ಅಗಡಿ ಮಠ, ಸದಾಶಿವಪೇಟೆ ಮತ್ತಿತರ ಮಠಗಳು ಶ್ರೀಗಳು ಉಪಸ್ಥಿತರಿದ್ದು, ಆಶೀರ್ವದಿಸಿದರು. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿದರು.


ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮತ್ತು ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿಯ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಸ್ವಾಮೀಜಿಗಳ ಈ ಭೇಟಿಯು ಹಲವು ವ್ಯಾಖ್ಯಾನಗಳಿಗೂ ಕಾರಣವಾಗಿವೆ.



Join Whatsapp