ರೋಗಿಗಳ ಚಿಕಿತ್ಸೆಗೆ ಕೇವಲ 10 ರೂ. ಶುಲ್ಕ ವಿಧಿಸುವ ಡಾ.ನೂರಿ ಪರ್ವೀನ್

Prasthutha|

ಹೈದರಾಬಾದ್: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದವರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ, ತಮ್ಮ ಬಳಿಗೆ ಬರುವ ರೋಗಿಗಳಿಗೆ ಕೇವಲ 10 ರೂ. ಶುಲ್ಕ ವಿಧಿಸುವ ಆಂಧ್ರ ಪ್ರದೇಶದ ಯುವ ವೈದ್ಯೆ ಡಾ.ನೂರಿ ಪರ್ವೀನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -

ವಿಜಯವಾಡದ ಮಧ್ಯಮವರ್ಗ ಕುಟುಂಬದಿಂದ ಬಂದಿರುವ ಡಾ.ನೂರಿ ಪರ್ವೀನ್, ಕಡಪಾ ಜಿಲ್ಲೆಯ ಖಾಸಗಿ ಕಾಲೇಜಿನಿಂದ ಎಂಬಿಎ ಪದವಿ ಪೂರೈಸಿ ಮೆಡಿಕಲ್ ಸೀಟ್ ಪಡೆದಿದ್ದು, ಇದೀಗ ವೈದ್ಯೆಯಾಗಿ ಬಡವರ ಸೇವೆಯಲ್ಲಿ ತಲ್ಲೀಣರಾಗಿದ್ದಾರೆ.

ಕಡಪಾದಲ್ಲಿ ತನ್ನ ಕ್ಲಿನಿಕ್ ತೆರೆದಿರುವ ಡಾ.ನೂರಿ, ಹೊರರೋಗಿಗಳಿಗೆ ಕೇವಲ 10 ರೂ. ಹಾಗೂ ಒಳರೋಗಿಗಳಿಗೆ ಕೇವಲ 50 ರೂ. ಶುಲ್ಕ ವಿಧಿಸುತ್ತಾರೆ. ಕಡಪ್ಪಾದಲ್ಲಿ ಸಾಮಾನ್ಯವಾಗಿ ಖಾಸಗಿ ವೈದ್ಯರು ವಿಧಿಸುವ ಶುಲ್ಕ ರೂ.100 ರಿಂದ ರೂ.200 ಆಗಿರುವಾಗ, ಡಾ.ನೂರಿ ಅತ್ಯಂತ ಕನಿಷ್ಟ ಶುಲ್ಕ ವಿಧಿಸಿ ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ.

- Advertisement -

ತಮ್ಮ ಬಳಿಗೆ ಬರುವ ಹೆಚ್ಚಿನ ರೋಗಿಗಳು ಅಪೌಷ್ಠಿಕಾಂಶತೆಯಿಂದ ಬಳಲುತ್ತಿದ್ದಾರೆ ಎಂದವರು ಹೇಳಿದ್ದಾರೆ. ತನ್ನ ಎರಡು ಸಂಘಟನೆಗಳಾದ ‘ಇನ್ ಸ್ಪೈರಿಂಗ್ ಹೆಲ್ತಿ ಯಂಗ್ ಇಂಡಿಯಾ’ ಹಾಗೂ ‘ನೂರ್ ಚಾರಿಟೇಬಲ್ ಟ್ರಸ್ಟ್’ ಮೂಲಕ ಲಾಕ್ ಡೌನ್ ಸಂದರ್ಭ ಬಡವರಿಗೆ ಆಹಾರ ಒದಗಿಸುವ ಯೋಜನೆಯನ್ನು ಆಕೆ ಹಮ್ಮಿಕೊಂಡಿದ್ದರು.

ಬಡವರಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯವನ್ನು ಒದಗಿಸಲೆಂದು ಮುಂದೆ ಮನಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಮಲ್ಟಿ ಸ್ಪೆಷಾಲಿಟಿ ಆಸ್ಪತೆಯೊಂದನ್ನು ಸ್ಥಾಪಿಸುವುದೇ ತನ್ನ ಗುರಿ ಎಂದು ಡಾ.ನೂರಿ ಹೇಳಿದ್ದಾರೆ.

Join Whatsapp