ರೈತರ ಬಾಯ್ಕಟ್ ಜಿಯೋ ಕರೆ | ಏರ್ ಟೆಲ್, ವೊಡಾಫೋನ್ ಐಡಿಯಾ ವಿರುದ್ಧ ಜಿಯೋ ದೂರು

Prasthutha|

ದೆಹಲಿಯಲ್ಲಿ ಪ್ರತಿಭಟನಾನಿರತ ರೈತರು ‘ಬಾಯ್ಕಾಟ್ ಜಿಯೋ’ ಕರೆ ನೀಡಿದ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿಯೇ ಸುಮಾರು 26 ಲಕ್ಷ ಜನ ಜಿಯೋನಿಂದ ಇತರ ಕಂಪನಿಗಳಿಗೆ ಪೋರ್ಟ್ ಆಗಲು ಮುಂದಾಗಿರುವುದು ಮುಖೇಶ್ ಅಂಬಾನಿ ಒಡೆತನದ ಜಿಯೋ ಕಂಪನಿಯನ್ನು ಕಂಗಾಲಾಗಿಸಿದೆ.

- Advertisement -

ಪ್ರತಿಭಟನಾನಿರತ ರೈತರು ನೀಡಿರುವ ‘ಬಾಯ್ಕಾಟ್ ಜಿಯೊ’ ಕರೆಯ ಹಿಂದೆ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಪಿತೂರಿಯಿದ್ದು, ಈ ಕಂಪನಿಗಳು ಅನೈತಿಕ ಮತ್ತು ಸ್ಪರ್ಧಾತ್ಮಕ ವಿರೋಧಿ ರೀತಿಯಲ್ಲಿ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ(MNP) ಅಭಿಯಾನವನ್ನು ನಡೆಸುತ್ತಿದೆ ಎಂದು ಜಿಯೋ ಟ್ರಾಯ್(Telecom Regulator Authority of India) ಗೆ ದೂರು ನೀಡಿದೆ.

ಕಳೆದ ನಾಲ್ಕೈದು ತಿಂಗಳಲ್ಲಿ ಜಿಯೋ ಗ್ರಾಹಕರು ಕುಸಿಯುತ್ತಿದ್ದು, ಜಿಯೋ ಸ್ಥಾನವನ್ನು ಏರ್‌ಟೆಲ್ ಪಡೆದುಕೊಳ್ಳುತ್ತಿದೆ. ಜಿಯೋದಿಂದ ಹಲವಾರು ಗ್ರಾಹಕರು ಹೊರನಡೆಯುತ್ತಿದ್ದಾರೆ.

- Advertisement -

ಅಂಬಾನಿ ಮತ್ತು ಅದಾನಿ ಕಂಪನಿಗಳ ಅನುಕೂಲಕ್ಕಾಗಿಯೇ ನೂತನ ಕೃಷಿ ಕಾಯ್ದೆಗಳನ್ನು ಮೋದಿ ಸರಕಾರ ಜಾರಿಗೆ ತಂದಿದೆ ಎಂದು ಆರೋಪಿಸಿರುವ ರೈತರು ಅಂಬಾನಿ-ಅದಾನಿ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ರೈತರ ಕರೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಲಕ್ಷಾಂತರ ಯುವಜರನು ಜಿಯೋ ಸಿಮ್ ಅನ್ನು ಕಿತ್ತೆಸೆದಿದ್ದಾರೆ.

ರೈತರನ್ನು ದೂರಲಾಗದೆ ಇದೀಗ ಜಿಯೋ ಏರ್ ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಟೆಲ್, ವೊಡಾಫೋನ್ ಜಿಯೋ ಆರೋಪವನ್ನು ತಳ್ಳಿಹಾಕಿವೆ.

ನೆಟ್ ‌ವರ್ಕ್ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದರಿಂದ ಬಹಳಷ್ಟು 4ಜಿ ಗ್ರಾಹಕರು ಏರ್‌ ಟೆಲ್ ನತ್ತ ಮುಖಮಾಡುತ್ತಿದ್ದಾರೆ. ಜಿಯೋದಲ್ಲಿಯೂ ಕೂಡ ನೆಟ್‌ ವರ್ಕ್ ಸಮಸ್ಯೆ ಎದುರಾಗಿದ್ದು, ರೈತರು ಬಾಯ್ಕಾಟ್ ಜಿಯೋ ಎಂದು ಕರೆ ನೀಡಿದ್ದಾರೆ. ಅದಕ್ಕೆ ಲಕ್ಷಾಂತರ ಯುವಜನರು ಬೆಂಬಲಿಸಿದ್ದು, ಇದೀಗ ಜಿಯೋಗೆ ಸಂಕಷ್ಟ ಎದುರಾಗಿದೆ.

Join Whatsapp