Home ಟಾಪ್ ಸುದ್ದಿಗಳು ರೈತರ ಪರವಾಗಿ ಮಾತನಾಡುತ್ತಿರುವ ವಾಜಪೇಯಿ; ಹಳೆಯ ವಿಡಿಯೋ ವೈರಲ್

ರೈತರ ಪರವಾಗಿ ಮಾತನಾಡುತ್ತಿರುವ ವಾಜಪೇಯಿ; ಹಳೆಯ ವಿಡಿಯೋ ವೈರಲ್

1980 ರಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡುವ ಬಿಜೆಪಿ ಮುಖಂಡ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವೀಡಿಯೊವನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಮತ್ತು ಅವುಗಳನ್ನು ಖರೀದಿಸದಿರುವ ಸರಕಾರದ ಕ್ರಮವನ್ನು ಟೀಕಿಸಿ ಮಾತನಾಡುತ್ತಿರುವ ವೀಡಿಯೊ ಆಗಿದೆ ಅದು.

ಸಣ್ಣ ರೈತರು ಸಮರ್ಪಕ ಶೇಖರಣಾ ಸಾಮರ್ಥ್ಯದ ಕೊರತೆಯಿಂದಾಗಿ ತಮ್ಮ ಬೆಳೆಗಳನ್ನು ಕಾಲು ಭಾಗದಷ್ಟು ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಅವರು ಈ ರೀತಿ ಪ್ರತಿಭಟಿಸಬೇಕಾಗಿ ಬಂದಿದೆ ಎಂದು ವಾಜಪೇಯಿ ಆ ವೀಡಿಯೋದಲ್ಲಿ ಹೇಳುತ್ತಿದ್ದಾರೆ. ಈಗ ಬಿಜೆಪಿ ಅಧಿಕಾರದಲ್ಲಿರುವಾಗ ರೈತರ ಪ್ರತಿಭಟನೆಯ ಬಗ್ಗೆ ತೆಗೆದುಕೊಂಡ ನಿಲುವು ಮತ್ತು ಆ ಸಮಯದಲ್ಲಿ ಪ್ರತಿಪಕ್ಷದಲ್ಲಿದ್ದ ವಾಜಪೇಯಿ ಅವರ ನಿಲುವುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

Join Whatsapp
Exit mobile version